Wednesday, January 28, 2026

ಅಕ್ರಮ ದನದ ಮಾಂಸ ಸಾಗಾಟ ಮೂವರ ಬಂಧನ

ಬಂಟ್ವಾಳ, ಜು. ೨೧: ರಿಕ್ಷಾವೊಂದರಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ವಾಹನ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿಗಳಾದ ಅಬ್ದುಲ್ ರಝಾಕ್, ರಾಝಿಕ್ ಹಾಗೂ ರಿಯಾಝ್ ಎಂಬವರನ್ನು ಪೊಲೀಸರು ವಶಕ್ಕೆಪಡೆಕೊಂಡಿದ್ದಾರೆ.
ಜು. ೨೦ರಂದು ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಮಂಜಲ್ ಪಲ್ಕೆ ಎಂಬಲ್ಲಿನ ಮನೆಯೊಂದರ ಹಿಂಬದಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ದನವನ್ನು ವಧೆ ಮಾಡಿ, ರಿಕ್ಷಾದಲ್ಲಿ ಸಾಗಿಸಲಾಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ೬೦ ಕೆ.ಜಿ. ದನದ ಮಾಂಸ, ಆಟೊರಿಕ್ಷಾ, ವಧೆ ಮಾಡಲು ಉಪಯೋಗಿಸಿದ ಸಲಕರಣೆಗಳ ಸಹಿತ ಮೂವರನ್ನು ವಶಕ್ಕೆಪಡೆಯಲಾಗಿದೆ. ವಶಪಡಿಸಿಕೊಂಡಿರುವ ಸೊತ್ತುಗಳ ಮೌಲ್ಯ ೧.೨೨ ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More from the blog

ಸಜೀಪ : ಜ.28, 29,30ರಂದು ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್

ಬಂಟ್ವಾಳ : ಜಲಾಲಿಯ್ಯಾ ಜುಮಾ ಮಸ್ಜಿದ್, ಚಟ್ಟೆಕ್ಕಲ್, ಸಜಿಪ ಇದರ ಆಶ್ರಯದಲ್ಲಿ ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಬುರ್ದಾ ಮಜ್ಲಿಸ್ ಜಿಸ್ತಿಯಾ ಖುತ್‌ಬಿಯತ್ ಜ.28, 29,30 ರಂದು ಜಲಾಲಿಯ್ಯ ಜುಮಾ ಮಸೀದಿ...

ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಒಡಿಯೂರುಶ್ರೀ

ವಿಟ್ಲ: ಸದೃಢ ದೇಶ ನಿರ್ಮಾಣದಲ್ಲಿ ಸೈನಿಕರ ಪರಿಶ್ರಮ, ತ್ಯಾಗ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಒಡಿಯೂರು ರಾಜಾಂಗಣದಲ್ಲಿ...

ವಿಟ್ಲ ಪಡ್ನೂರು : ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ವಿಟ್ಲ: ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಬದಲಾಯಿಸಿದ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ವಿಟ್ಲ ಪಡ್ನೂರು ಗ್ರಾಮ...

ಪುತ್ತೂರು : ಅಕ್ರಮ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ – ನಾಲ್ವರ ಬಂಧನ

ಪುತ್ತೂರು : ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿ ದ್ದಾರೆ ಮೊಹಮ್ಮದ್ ಹರ್ಷದ್...