ಪುಂಜಾಲಕಟ್ಟೆ : ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮ ಬುಧವಾರ ನಡೆಯಿತು.
ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ದ್ವಿಚಕ್ರ ವಾಹನ ಸವಾರರಿಗೆ ಶಾಲಾ ಮಕ್ಕಳ ಕೈಯಲ್ಲಿ ಗುಲಾಬಿ ಹೂ ನೀಡಿ, ಹೆಲ್ಮೆಟ್ ತಲೆಗೆ ಇಟ್ಟು ರಸ್ತೆ ಸುರಕ್ಷತೆಯ ದ್ರಷ್ಟಿಯಿಂದ ಹೆಲ್ಮೆಟ್ ಧರಿಸಬೇಕು ಎಂಬುದನ್ನು ಮನವರಿಕೆ ಮಾಡಲಾಯಿತು. ಬೆಲ್ಟ್ ಹಾಕದೆ ಕಾರು ವಾಹನ ಚಾಲನೆ ಮಾಡುವರಿಗೂ ಹೂ ನೀಡಿ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ಹಾಗೂ ಕಾನೂನಿನ ಅರಿವು ಜಾಗ್ರತಿ ಮೂಡಿಸುವ ಕಾರ್ಯಕ್ರಮ ಪುಂಜಾಲಕಟ್ಟೆ ಎಸ್ .ಐ.ಸೌಮ್ಯ ಅವರ ನೇತ್ರತ್ವದಲ್ಲಿ ನಡೆಯಿತು.

