ವಿಟ್ಲ: ಅಡ್ಯನಡ್ಕ ಸ್ನೇಹ ಟ್ರೇಡರ್‍ಸ್ ವತಿಯಿಂದ ಪುಣಚ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಮಾಹಿತಿ ಮತ್ತು ತರಬೇತಿ ಕಾರ್‍ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಗ್ರಿಪ್ಲಾಸ್ಟ್ ಕಂಪೆನಿ ಬೆಂಗಳೂರು ಇದರ ತಂತ್ರಜ್ಞರಾದ ಹರಿಪ್ರಸಾದ್ ಇವರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ವಿಧಾನ ಅಳವಡಿಸಿ ಅಧಿಕ ಇಳುವರಿ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಯಾವ ಬೆಳೆಗೆ ಯಾವ ಬಣ್ಣದ ಶೇಡ್ ನೆಟ್ ಸೂಕ್ತ, ಅಡಕೆ ಪಾಲಿಹೌಸ್, ನರ್ಸರಿ ಪಾಲಿಹೌಸ್, ಟ್ರೀಗಾರ್ಡ್, ಗ್ರೌಂಡ್‌ಕವರ್ ಹಾಗೂ ಮಲ್ಚಿಂಗ್ ಶೀಟ್‌ನ ಆಯ್ಕೆ ಮತ್ತು ಕೃಷಿಯಲ್ಲಿ ಅಳವಡಿಸುವ ಬಗ್ಗೆ ಮಾಹಿತಿ ನೀಡಿದರು.
ಪುಣಚ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ ಭಾಗವಹಿಸಿದ್ದರು.
ಸ್ನೇಹ ಟ್ರೇಡರ್ಸ್‌ನ ಮುರಲೀಧರ ಶಾಸ್ತ್ರಿ ಮೂಡಂಬೈಲು ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರತಿಭಾ ಶಾಸ್ತ್ರಿ ವಂದಿಸಿದರು. ಸುಮನ ಶಾಸ್ತ್ರಿ ನಿರೂಪಿಸಿದರು. ರಾಮಚಂದ್ರ ಶಾಸ್ತ್ರಿ ಮೂಡಂಬೈಲು ಕಾರ್‍ಯಕ್ರಮ ಸಂಯೋಜಿಸಿದರು.

