ಪುಣಚ: ಗ್ರಾಮದ ಆಜೇರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ನಡೆಯಿತು. ಸಭಾ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯೆ ಕವಿತಾ ಸುಬ್ಬನಾಯ್ಕ ಉದ್ಘಾಟಿಸಿದರು. ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪುತ್ತೂರಿನ ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ, ಪುಣಚ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ.ಬಿ, ಸದಸ್ಯರಾದ ಜಯರಾಮ ಕಾನ, ಗಂಗಯ್ಯ ಗೌಡ ಕಲ್ಲಾಜೆ, ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ ಹೆಚ್., ಅಜ್ಜಿನಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕುಕ್ಕ ಮಾಸ್ಟರ್ ಭಾಗವಹಿಸಿದ್ದರು.
ಎಸ್‍ಡಿಎಮ್‍ಸಿ ಅಧ್ಯಕ್ಷ ವೆಂಕಟ್ರಮಣ ಆಜೇರು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸೀತಾಲಕ್ಷ್ಮಿ ವರದಿ ವಾಚಿಸಿದರು. ವಾಸುದೇವ ನಾಯಕ್ ವಂದಿಸಿದರು. ಗೌರವ ಶಿಕ್ಷಕ ಜಯರಾಮ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ನಾನಾ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಪುಣಚ ಸ್ನೇಹ ಕಲಾವಿದರಿಂದ ಸಾಂಸ್ಕøತಿಕ ಸಂಜೆ ಪ್ರದರ್ಶನಗೊಂಡಿತು. ಶಾಲಾ ವಿದ್ಯಾರ್ಥಿ ಹಾಗೂ ಹಿರಿಯ ವಿದ್ಯಾರ್ಥಿಗಳ ಕೂಡುವಿಕೆಯಿಂದ ಯಕ್ಷಗಾನ ನಡೆಯಿತು.


