ವಿಟ್ಲ: ಪುಣಚ ಸೇವಾ ಸಹಕಾರಿ ಸಂಘ ಮತ್ತು ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಜಂಟಿ ಸಹಯೋಗದಲ್ಲಿ ಜು.18 ರಂದು ಪುಣಚ ಸಹಕಾರಿ ಸಂಘದ ಸಭಾ ಭವನದಲ್ಲಿ ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ’ಭವಿಷ್ಯದ ಬೆಳೆ ಗೇರು’ ವಿಷಯದಡಿಯಲ್ಲಿ ಗೇರು ಕೃಷಿಯ ಸಮಗ್ರ ಮಾಹಿತಿ ಶಿಬಿರ ನಡೆಯಲಿದೆ. ಸಹಕಾರಿ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

