ವಿಟ್ಲ: ಜೆಮ್ ಪಬ್ಲಿಕ್ ಇಂಗ್ಲಿಷ್ ಮೀಡಿಯಂ ಶಾಲೆಗೆ ಹೊಸದಾಗಿ ಸೇರಿದ ಎಲ್.ಕೆ.ಜಿ. ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.
ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು. ರಿಬ್ಬನ್ ಕಟ್ ಮಾಡುವ ಮೂಲಕ ಸಂಸ್ಥೆಯ ವ್ಯವಸ್ಥಾಪಕ ಹಾಜಿ ಜಿ.ಅಹ್ಮದ್ ಯೂಸುಫ್ ಚಾಲನೆ ನೀಡಿದರು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ. ಜಿ. ಮಹಮ್ಮದ್ ಹನೀಫ್, ಸಂಚಾಲಕ ಹಾಜಿ ಜಿ. ಅಹ್ಮದ್ ಮುಸ್ತಫಾ, ಹಾಜಿ ಜಿ. ಮೊಹಮ್ಮದ್ ಯೂಸುಫ್, ಫ್ರೌಢ ವಿಭಾಗದ ಮುಖ್ಯ ಶಿಕ್ಷಕ ನಿರಂಜನ್ ಡಿ., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.
