ಮಂಗಳೂರು : ಜೂ.1 ರಿಂದ ಖಾಸಗಿ ಬಸ್ ಸಂಚಾರ ಆರಂಭವಾಗಿದ್ದು, ಎಲ್ಲಾ ಖಾಸಗಿ ಬಸ್ಸುಗಳಿಗೆ ಸ್ಯಾನಿಟೈಝೇಷನ್ ಮಾಡಲಾಗಿದೆ.
ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಒಳ ಭಾಗ, ಹೊರ ಭಾಗ ಸೇರಿದಂತೆ ಪೂರ್ತಿ ಬಸ್‌ಗೆ ಸ್ಯಾನಿಟೈಝೇಷನ್ ಮಾಡಲಾಗಿದ್ದು ಫುಟ್ ಬೋರ್ಡ್‌ಗಳಿಗೂ ಸ್ಯಾನಿಟೈಝರ್ ಸಿಂಪಡನೆ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಖಾಸಗಿ ಸಂಸ್ಥೆಯ ಬಸ್‌ಗಳ ಪ್ರತಿ ಟ್ರಿಪ್ ನ ನಂತರ ಸ್ಯಾನಿಟೈಝೇಷನ್ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.


