Friday, July 11, 2025

ಬಾಂಗ್ಲಾ ದೇಶದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ: ವಿ.ಹಿಂ.ಪ.,ಬಜರಂಗದಳ ಪ್ರತಿಭಟನೆ

ಬಂಟ್ವಾಳ: ಬಾಂಗ್ಲಾ ದೇಶದಲ್ಲಿ ನವರಾತ್ರಿ ಸಂದರ್ಭ ಹಿಂದೂ ಸಮುದಾಯದ ಮೇಲೆ ಮತಾಂಧ ಮುಸ್ಲಿಂ ಸಂಘಟನೆಗಳು ದಾಳಿ ಮಾಡಿರುವ ಕೃತ್ಯವನ್ನು ಖಂಡಿಸಿ ವಿ.ಹಿಂ.ಪ.,ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಬುಧವಾರ ಸಂಜೆ ಬಿ.ಸಿ.ರೋಡಿನ ಮೇಲ್ಸ್ ತುವೆಯ ಕೆಳಭಾಗದಲ್ಲಿ ಪ್ರತಿಭಟನೆ ನಡೆಯಿತು. ವಿ.ಹಿಂ.ಪ.ನ ಜಿಲ್ಲಾ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ, ಆಚಾರ ,ವಿಚಾರ,ಸಂಸ್ಕೃತಿಯಿಂದ ಹಿಂದೂ ರಾಷ್ಟ್ರವಾಗಿರುವ ಭಾರತದಲ್ಲಿ ಹಿಂದುಗಳ ಮೀಲಿನ ದೌರ್ಜನ್ಯ ಮರುಕಳಿಸುತ್ತಿದ್ದು, ಇದನ್ನು ಎದುರಿಸಲು ಗ್ರಾಮ ಮಟ್ಟದಲ್ಲಿ ವಿ.ಹಿಂ.ಪ.,ಬಜರಂಗದಳ ಸನ್ನದ್ದವಾಗಿದೆ ಎಂದರು. ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ,ದೇವಸ್ಥಾನಗಳ ಮೇಲಿನ ದಾಳಿ, ಮನೆಗೆ ಬೆಂಕಿ ಹಚ್ಚುವಂತ ಕೃತ್ಯದಿಂದ ಹಿಂದೂಗಳ ಪಾಲಿಗೆ ನರಕ ಸದೃಶ್ಯವಾಗಿದ್ದು,ಬಾಂಗ್ಲಾ ಸರಕಾರ ಹಿಂದೂ ಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು. ಅರ್. ಎಸ್‌ ಎಸ್. ರಾಷ್ಟ್ರ ಭಕ್ತ ಸಂಸ್ಥೆಯಾಗಿದ್ದು, ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಮತ್ತು ರಾಜಕೀಯ ತೆವಲಿಗಾಗಿ ಟೀಕಿಸುವುದನ್ನು ಖಂಡಿಸಿದ ಅವರು ಇತ್ತೀಚಿನ ದಿನಗಳಲ್ಲಿ ಹಿಂದೂ ವಿರೋಧಿ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಹಿಂದೂ ಸಮಾಜ ಎಚ್ಚರಿಕೆ ವಹಿಸಬೇಕಾಗಿದೆ ಎಂದರು. ಬಜರಂಗದಳದ ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ,ಪ್ರಖಂಡ ಸಂಚಾಲಕ ಶಿವಪ್ರಸಾದ್ ತುಂಬೆ, ಪ್ರಮುಖರಾದ ಸಂತೋಷ್ ಸರಪಾಡಿ, ದೀಪಕ್ ಅಜೆಕಳ, ವಿನೀತ್ ತುಂಬೆ, ಪ್ರಸಾದ್ ಬೆಂಜನಪದವು, ಪ್ರವೀಣ್ ಕುಂಟಾಲಪಲ್ಕೆ, ಹರೀಶ್ ಅಮ್ಟಾಡಿ ಮತ್ತಿತರರಿದ್ದರು.

More from the blog

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ : ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ನಿರ್ದೇಶನ..

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ‌ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ...