Friday, July 4, 2025

ಪಾಣೆಮಂಗಳೂರು ಮತ್ತು ಮಹಿಳಾ ಕಾಂಗ್ರೇಸ್ ವತಿಯಿಂದ ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಬಿಸಿರೋಡಿನಲ್ಲಿ ಪ್ರತಿಭಟನೆ

ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ *ಶ್ರೀ ಬಿ.ರಮನಾಥ ರೈ* ರವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯ ವಿರುದ್ದವಾಗಿ *100 ನಾಟೌಟ್* ಪ್ರತಿಭಟನಾ ಕಾರ್ಯಕ್ರಮವು ಮೇಲ್ಕಾರ್ ಎಚ್.ಪಿ ಪೆಟ್ರೋಲ್ ಪಂಪ್ ನ ಮುಂಬಾಗ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಇದರ ಅಧ್ಯಕ್ಷೆ * ಜಯಂತಿ ವಿ.ಪೂಜಾರಿ* ರವರ ನೇತೃತ್ವದಲ್ಲಿ ನಡೆಯಿತ್ತು….

ಮಾಜಿ ಸಚಿವರಾದ  ಬಿ.ರಮನಾಥ ರೈ ರವರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ತೈಲಬೆಲೆಗಳ ಏರಿಕೆಯನ್ನು ಖಂಡಿಸಿದರು…

ಈ ಸಂದರ್ಭದಲ್ಲಿ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷರಾದ  ಮಲ್ಲಿಕಾ ವಿ ಶೆಟ್ಟಿ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯರಾದ ಜಾಸ್ಮಿನ್ ಡಿ ಸೋಜ .ಮಾಜಿ ಕೆಪಿಸಿ ಸಿ ಸದಸ್ಯರಾದ  ಐಡಾ ಸುರೇಶ್. ಪುರಸಭಾ ಉಪಾಧ್ಯಕ್ಷರಾದ  ಜೆಸಿಂತಾ .ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ .  ಗಾಯತ್ರಿ ರವೀಂದ್ರ ಸಫಲ್ಯ  ಸ್ವಪ್ನಾ.ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷ ರು ಹಾಗೂ ಕಾರ್ಯಕರ್ತರು ಇಪಸ್ಥಿತರಿದ್ದರು

More from the blog

ಬೆಂಜನಪದವು ಶಾಲೆ : ಉಚಿತ ಯಕ್ಷಗಾನ ನಾಟ್ಯ ತರಗತಿ ಶುಭಾರಂಭ..

ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ ಗೊಂಡಿತು. ಫೌಂಡೇಶನ್ ನ ಸಂಚಾಲಕರಾದ ಶ್ರೀ ವಾಸುದೇವ ಐತಾಳ್ ದೀಪ...

ಜು.12ರಂದು ಬಂಟ್ವಾಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್..

ಬಂಟ್ವಾಳ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜು.12ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇವರ...

ಅಕ್ರಮ ಗಣಿಗಾರಿಕೆ: ಲಾರಿಗಳನ್ನು ತಡೆದ ಗ್ರಾಮಸ್ಥರು..

ಬಂಟ್ವಾಳ: ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ. ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ...

Bantwal : ನೇತ್ರಾವತಿ ‌ನದಿಯಲ್ಲಿ ಅಪರಿಚಿತ ಗಂಡಸಿನ‌ ಮೃತದೇಹ ಪತ್ತೆ : ಗುರುತು ಪತ್ತೆಗೆ ಮನವಿ..

ಬಂಟ್ವಾಳ: ಇಲ್ಲಿನ‌ ನೇತ್ರಾವತಿ ‌ನದಿಯಲ್ಲಿ ಜುಲೈ 2 ರಂದು ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ. ಸುಮಾರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದು,ಇವರ ಗುರುತು...