ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ವಾರ್ಷಿಕೋತ್ಸವ ಹಾಗೂ ಮಹಾಸಭೆಯು ಶಾರದಾ ಸಭಾಭವನ ರಾಮಲ್ಕಟ್ಟೆ ತುಂಬೆಯಲ್ಲಿ ನಡೆಯಿತು.

ಪುರ್ವಾನ್ಹ ವಾರ್ಷಿಕೋತ್ಸವವನ್ನು ಸಂಘದ ಅಧ್ಯಕ್ಷರಾದ ಶಿವಕುಮಾರ್ ಉದ್ಘಾಟಿಸಿದರು. ಅಪರಾನ್ಹ 3 ಘಂಟೆಗೆ ಮಹಾಸಭೆಯನ್ನು ಮುಖ್ಯಅತಿಥಿಗಳಾದ ಶ್ರೀ ರಾಧಾಕೃಷ್ಣ ಬಂಟ್ವಾಳ್ ಅಧ್ಯಕ್ಷರು ರಾ. ರಾ. ಸಂ. ಫೌಂಡೇಶನ್, (ರಿ) ಬಂಟ್ವಾಳ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ತುಂಬೆ ಕುಲಾಲ ಸೇವಾ ಸಂಘದ ಕಾರ್ಯಚಟುವಟಿಕೆಗಳಾದ ಹೆಣ್ಣುಮಕ್ಕಳ ಮದುವೆಗೆ ಸಹಾಯ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಬಡವರಿಗೆ ಗ್ರಹನಿರ್ಮಾಣಕ್ಕೆ ಸಹಾಯಧನ, ಆರೋಗ್ಯ ಚಿಕಿತ್ಸೆಗೆ ಸಹಾಯಧನ, ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ, ಕಲೆ ಸಾಂಸ್ಕೃ ತಿಕವಾಗಿ ತೊಡಗಿಸಿಕೊಳ್ಳುವಿಕೆ, ಭಜನಾ ತಂಡ ಹೀಗೆ ಸಮಾಜದ ಎಲ್ಲಾ ಮಜಲುಗಳಲ್ಲಿ ತೊಡಗಿಸಿಕೊಂಡು ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೊರ್ವ ಅತಿಥಿ ಶ್ರೀ ರಾಮಪ್ರಸಾದ ಖ್ಯಾತನ್ಯಾಯವಾದಿಗಳು ಮಂಗಳೂರು ಮಾತನಾಡುತ್ತಾ ಕುಲಾಲ ಸಮಾಜದ ಆರ್ಥಿಕ ಹಿಂದುಳಿದ ವರ್ಗವನ್ನು ಕೇಂದ್ರವಾಗಿಟ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವುದು ನಿಜವಾಗಿಯೂ ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶಿವಕುಮಾರ್ ವಹಿಸಿದ್ದರು.
ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಲತಾಗೋಪಾಲ ಗೋವಿಂತೊಟ,ಉಪಾಧ್ಯಕ್ಷರಾದ ಪ್ರಿಯಾಸತೀಶ್ ಉಪಸ್ಥಿತರಿದ್ದರು., ಈ ಸಂದರ್ಭದಲ್ಲಿ ಬಲೆ ತೆಲಿಪಲೆ ಖ್ಯಾತಿಯ ನಿತಿನ್ ತುಂಬೆ ಕೃಷಿಕ ಮಹಿಳೆ ಹೊನ್ನಮ್ಮ ಕೂಸಪ್ಪಮೂಲ್ಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಕು. ನಿಧಿಷಾ ಕು. ಸಂಜನಾ ಇವರನ್ನು ಗೌರವಿಸಲಾಯಿತು.ಹರೀಶ್ ಪೆರ್ಲಬೈಲು ಮತ್ತು ಉಮಾ ಲಿಂಗಪ್ಪ ಸನ್ಮಾನ ಪತ್ರವನ್ನು ವಾಚಿಸಿದರು.ಕು. ನಿಧಿಷಾ ಪ್ರಾರ್ಥನೆ ಹಾಡಿದರು. ಸಂಘಟನಾ ಕಾರ್ಯದರ್ಶಿ ಭಾಸ್ಕರ್ ಕುಲಾಲ್ ಸ್ವಾಗತಿಸಿದರು.ಗೌರವ ಸಲಹೆಗಾರರಾದ ಶೇಷಪ್ಪ ಮಾಸ್ಟರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾನಂದ ಕುಲಾಲ್ ವರದಿ ಮಂಡಿಸಿದರು. ಪುರ್ವಾನ್ಹ ಮಕ್ಕಳಿಗೆ ಹಾಗೂ ಸಂಘದ ಸದಸ್ಯರ ಆಟೋಟ ಸ್ಪರ್ಧೆಗಳನ್ನು ಶಿಕ್ಷಕಿ ಭಾರತಿ ಶೇಷಪ್ಪ, ಕು. ಧನ್ಯ ಮತ್ತು ದಿನೇಶ್ ಪೆರ್ಲಬೈಲ್ ಹಾಗೂ ನಡೆಸಿಕೊಟ್ಟರು. ಹರೀಶ್ ಪೆರ್ಲಬೈಲು ಹಾಗೂ ಅಶೋಕ್ ರಾಮಲ್ಕಟ್ಟೆ ಬಹುಮಾನ ದ ವ್ಯವಸ್ಥೆಯನ್ನು ಮಾಡಿದ್ದರು.
ಬೆಳಗ್ಗಿನ ಉಪಹಾರ ಕೃಷ್ಣ ಪೆರ್ಲಬೈಲು, ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಐತಪ್ಪ ಕುಲಾಲ್, ಸಂದೀಪ್ ಕುಲಾಲ್, ಗೋಪಾಲ್ ಬೊಲ್ಲಾರಿ ಹಾಗೂ ಶೇಷಪ್ಪ ಮಾಸ್ಟರ್ ಮಾಡಿದರು.ಶ್ರೀ ಕೀರ್ತಿಶ್ ಕುಲಾಲ್,ಲಿಂಗಪ್ಪ ಕುಲಾಲ್, ಶೋಭಾ ಭಾಸ್ಕರ್, ಶೋಭಾ ಸದಾನಂದ್, ಮಾಲತಿ ದಿನೇಶ್, ಭಾರತಿ ಐತಪ್ಪ, ಬಬಿತ ಅಶೋಕ್, ಮಿತುಲಾ ಕಿಶೋರ್ ಸಹಕರಿಸಿದರು.ಧನ್ಯವಾದವನ್ನು ಕಾರ್ಯದರ್ಶಿ ಸಂದೀಪ್ ಮುದಲ್ಮೆ ನೀಡಿದರು.ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಸೌಮ್ಯದಿವಾಕರ ಹಾಗೂ ಶ್ರೀಮತಿ ಭಾರತಿ ಶೇಷಪ್ಪ ಮಾಡಿದರು.