ಬೆಳ್ತಂಗಡಿ : ಕಲ್ಲುರ್ಟಿ ಪಂಜುರ್ಲಿ ಮೈಸಂದಾಯ ಬನ್ನಾನ್ ಕುಟುಂಬಸ್ಥರ ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ.)ಕೈಲಾ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಕೈಲಾಧರ್ಮ ಚಾವಡಿ ಮತ್ತು ತರವಾಡುಮನೆಯ ಶೀಲಾನ್ಯಾಸ ಕಾರ್ಯಕ್ರಮ ಫೆ.9ರಂದು ಬೆಳಗ್ಗೆ 9:32ರ ಮೀನ ಲಗ್ನ ಸುಮೂರ್ತದಲ್ಲಿ ರವಿ ಶಾಂತಿ ಇವರ ಪೌರೋಹಿತ್ಯದಲ್ಲಿ ಅಶೋಕ್ ಶಾಂತಿ ಇವರ ನೇತೃತ್ವದಲ್ಲಿ ತೈಲ ತರವಾಡು ಮನೆಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.



ಈ ಕಾರ್ಯಕ್ರಮದಲ್ಲಿ ಊರಿನ ಗುರಿಕಾರರಾದ ಸದಾನಂದ ಪೂಜಾರಿ, ದೇನ್ತೊಟ್ಟು ಗುತ್ತು ಮನೆಯ ಗುರಿಕಾರರಾದ ರಮೇಶ್ ಪೂಜಾರಿ, ಕೋರೊಟ್ಟು ಗುತ್ತು ಮನೆಯ ಸುದೀರ್ ಶೆಟ್ಟಿ, ಕಲಾಯ ಗುತ್ತು ಮನೆಯ ಚಿದಾನಂದ ಪೂಜಾರಿ, ಕರಂಗಿಲ್ ಗುತ್ತು ಸುಧಾಕರ ಪೂಜಾರಿ ಹಾಗೂ ಕೈಲಾ ತರವಾಡಿನ ಹಿರಿಯರಾದ ಸುಂದರ ಪೂಜಾರಿ ಬಲ್ಲಮಂಜ, ವೆಂಕಪ್ಪ ಪೂಜಾರಿ ಸುಲ್ಕೇರಿ ಮತ್ತು ಹಿರಿಯರು, ಮಹಿಳೆಯರು, ಮತ್ತು ಕುಟುಂಬಸ್ಥರು ಹಾಗೂ ಟ್ರಸ್ಟಿನ ಅಧ್ಯಕ್ಷರಾದ ಕುಶಾಲ ಕೈಲಾ ಕಾರ್ಯದರ್ಶಿಗಳಾದ ತಾರಾನಾಥ್ ಕಜೇಕಾರ್, ಕೋಶಾಧಿಕಾರಿಗಳಾದ ಹರೀಶ್ ಪಚ್ಚಾಜೆ , ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.