Monday, January 26, 2026

ಪ್ರಿಯಾ ಎಲೆಕ್ಟ್ರಾನಿಕ್ಸ್ ನಲ್ಲಿ ಬೆಂಕಿಗೆ ಕಾರಣ ಏನು…? : ಕಟ್ಟಡಕ್ಕೆ ಫೈರ್ ಸೇಫ್ಟಿ ಸುರಕ್ಷತಾ ಕ್ರಮ ಅಳವಡಿಕೆ ಮಾಡಲಾಗಿತ್ತಾ…?

ಬಿಸಿರೋಡಿನ ಪ್ರಿಯಾ ಇಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಫೆ. 2 ರಂದು ಗುರುವಾರ ಬೆಳಿಗ್ಗಿನ ಜಾವ ನಡೆದಿದೆ.

ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಎದರುಕಡೆ ಕೈಕುಂಜೆ ರಸ್ತೆಯಲ್ಲಿರುವ ಪ್ರೀತಂ ಎಂಬವರಿಗೆ ಸೇರಿದ ಪ್ರಿಯಾ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ ತಗುಲಿ ಕೊಮಾಕಿ ಕಂಪೆ‌ನಿಗೆ ಸೇರಿದ ಸ್ಕೂಟರ್ ಹಾಗೂ ಎಲೆಕ್ಟ್ರಾನಿಕ್ಸ್ ಸೊತ್ತುಗಳು ಸುಟ್ಟು ಭಸ್ಮವಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ವರು ಬೆಂಕಿಯನ್ನು ನಂದಿಸಿದ್ದಾರೆ.

ಯಾವ ಕಾರಣದಿಂದ ಕಟ್ಟಡಕ್ಕೆ ಬೆಂಕಿ ತಗುಲಿದೆ ಎಂಬುದು ಇನ್ನೂ ಕೂಡ ಸರಿಯಾಗಿ ತಿಳಿದುಬಂದಿಲ್ಲ.

ಪ್ರಿಯಾ ಎಲೆಕ್ಟ್ರಾನಿಕ್ಸ್ ಕಟ್ಟಡದ ಮೇಲಿನ ಅಂತಸ್ತಿನಲ್ಲಿ ತಗಡು ಶೀಟು ಅಳವಡಿಸಿ ಗೋದಾಮು ಮಾಡಲಾಗಿತ್ತು.

ಇದರಲ್ಲಿ ಕೊಮಾಕಿ ಕಂಪೆನಿಗೆ ಸೇರಿದ ಸ್ಕೂಟರ್ ಗಳನ್ನು ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು.

ಲಕ್ಷಾಂತರ ಮೌಲ್ಯದ ಸೊತ್ತುಗಳು ಯಾವುದು? ಎಷ್ಟು ಇತ್ತು…?

ಕೊಮಾಕಿ ಕಂಪೆನಿಗೆ ಸೇರಿದ 45 ಸ್ಕೂಟರ್, ಕಚೇರಿ ಉಪಯೋಗ ದ ಕಂಪ್ಯೂಟರ್, ಗ್ರಾಹಕರ ದಾಖಲೆಗಳನ್ನು ಹೊಂದಿರುವ ಸರ್ವರ್, 70 ಟಿಲ್ಟಿಂಗ್ ಗ್ರೈಂಡರ್ , 100 ಅಧಿಕ ವಾಷಿಂಗ್ ಮೆಷಿನ್, ಪ್ರಿಡ್ಜ್ , ಹತ್ತಾರು ಎ.ಸಿ. ಗ್ರಾಹಕರು ರಿಪೇರಿಗೆ ತಂದು ಕೊಟ್ಟಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಲಿಪ್ಟ್, ಸೋಲಾರ್, ವಿದ್ಯುತ್ ವಯರ್ ಗಳು, ಹೀಗೆ ಅನೇಕ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ.

ಬ್ಯಾಟರಿ ಬ್ಲಾಸ್ಟ್ ಆಗಿರಬಹುದೇ…?

ತಗಡು ಶೀಟಿನ ಕೊಠಡಿಯಲ್ಲಿ ಕೊಮಾಕಿ ಕಂಪೆನಿಗೆ ಸೇರಿದ ಸ್ಕೂಟರ್ ಗಳನ್ನು ದಾಸ್ತಾನು ಇರಿಸಲಾಗಿತ್ತು.

ರಾತ್ರಿ ವೇಳೆ ಎಲೆಕ್ಟ್ರಿಕ್‌ ಸ್ಕೂಟರ್ ನ ಬ್ಯಾಟರಿಯನ್ನು ಚಾರ್ಜಿಂಗ್ ಗಾಗಿ ಇಡಲಾಗಿತ್ತು ಎನ್ನಲಾಗಿದೆ .

ಓವರ್ ಚಾರ್ಜ್ ಆಗಿ ಬ್ಯಾಟರಿ ಬ್ಲಾಸ್ಟ್ ಆಗಿರಬಹುದೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಆದರೆ ಈ ರೀತಿಯಲ್ಲಿ ಬ್ಲಾಸ್ಟ್ ಆಗುತ್ತಾ? ಇದಕ್ಕೆ ಕಂಪೆನಿ ಸರಿಯಾದ ಉತ್ತರ ನೀಡಬಹುದು.

ಎಲ್ಲವು ಜನರ ಊಹೆಯಷ್ಡೆ! ಬೆಂಕಿಗೆ ಸರಿಯಾದ ಕಾರಣ ಗೊತ್ತಾಗಿಲ್ಲ ಅನ್ನುವುದು‌ಮಾತ್ರ ಸ್ಪಷ್ಟ…

ಸಕ್ರಮ…?

ಪ್ರಿಯಾ ಎಲೆಕ್ಟ್ರಾನಿಕ್ಸ್ ನ ಮೇಲಿನ ಅಂತಸ್ತು ಅಂದರೆ ತಗಡು ಶೀಟು ಹಾಕಿ ನಿರ್ಮಿಸಿರುವ ದಾಸ್ತಾನು ‌ಕೊಠಡಿಗೆ ಸ್ಥಳೀಯ ಪುರಸಭಾ ಇಲಾಖೆ ಅನುಮತಿ ಇದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಈ ಮೇಲಿನ ನಾಲ್ಕನೇ ಅಂತಸ್ತಿನಲ್ಲಿ ತುರ್ತು ನಿರ್ಗಮನ ವ್ಯವಸ್ಥೆ ಇಲ್ಲದೆ ಇರುವ ಬಗ್ಗೆ ಯೂ ಜನರು ಆಡಿಕೊಳ್ಳುತ್ತಿದ್ದರು.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...