ಬಂಟ್ವಾಳ: ಕೇಂದ್ರ ಸರಕಾರದ ಬ್ಯಾಂಕ್ ಅಪ್ ಬರೋಡ ದ ಜೊತೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನ ಗೊಳಿಸಿರುವುದನ್ನು ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ ಖಂಡಿಸಿದ್ದಾರೆ.
ಬ್ಯಾಂಕಿಂಗ್ ಬಗ್ಗೆ ಜ್ಞಾನ ಇಲ್ಲದ ಹರಿಕೃಷ್ಣ ಬಂಟ್ವಾಳ್ ವಿಜಯ ಬ್ಯಾಂಕ್ ವಿಲೀನ ವನ್ನು ಸಮರ್ಥಿಸಿರುವುದು ಖಂಡನೀಯ, ಹೆಚ್ಚು ಶಾಖೆಗಳನ್ನು ಹೊಂದಿ 2000 ಕೋಟಿ ಗಿಂತಲೂ ಹೆಚ್ಚು ನಷ್ಟದಲ್ಲಿರುವ ಬ್ಯಾಂಕ್ ಆಪ್ ಬರೋಡ ಬ್ಯಾಂಕ್ ನ್ನು ಲಾಭದಾಯಕ ಮತ್ತು ಆರ್ಥಿಕವಾಗಿ ಬಲಿಷ್ಟವಿರುವ ವಿಜಯ ಬ್ಯಾಂಕನ್ನು ಇತರೆ ಬ್ಯಾಂಕ್ ನೊಂದಿಗೆ ವಿಲೀನ ಗೊಳಿಸಿರುವುದು ಅವೈಜ್ಞಾನಿಕ ವಾಗಿದೆ ಎಂದು ಕುಂದರ್ ಆರೋಪ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಪ್ರತಿಷ್ಟಿತ ವಿಜಯ ಬ್ಯಾಂಕನ್ನು ವಿಲೀನ ಗೊಳಿಸಿರುವ ಬಗ್ಗೆ ಲೋಕಸಭೆಯ ಅಧಿವೇಶನದಲ್ಲಿ ಚಕಾರವೆತ್ತದ ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ವಿಜಯ ಬ್ಯಾಂಕ್ ಸ್ಥಾಪಕರಿಗೆ ಮತ್ತು ಲಕ್ಷಾಂತರ ಗ್ರಾಹಕರಿಗೆ ಮತ್ತು ಬಂಟ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಅವರು ತಿಳಿಸಿದ್ದಾರೆ.
ಬಾವುಟಗುಡ್ಟೆಯ ಲೈಟ್ ಹೌಸ್ ಹಿಲ್ ರಸ್ತೆಗೆ ಮೂಲ್ಕಿ ಸುಂದರರಾಮ್ ಶೆಟ್ಟಿಯವರ ಹೆಸರು ಇಡುವ ಬಗ್ಗೆ ಗೊಂದಲ ಸ್ರಷ್ಟಿಸಿದ ಬಿಜೆಪಿ ನಾಯಕರು ವಿಜಯ ಬ್ಯಾಂಕ್ ನ ಅಸ್ಥಿತ್ವಕ್ಕೆ ಧಕ್ಕೆಯಾದಾಗ ಮೌನವಹಿಸಿರುವುದು ಖಂಡನೀಯ ಎಂದ ಅವರು ವಿಜಯ ಬ್ಯಾಂಕ್ ವಿಲೀನದ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಹರಿಕೃಷ್ಣ ಬಂಟ್ವಾಳ್ ಅವರಿಗೆ ಸವಾಲು ಹಾಕಿದ್ದಾರೆ.
