Friday, January 30, 2026

ಚುನಾವಣಾ ಕಣದಿಂದ ಹಿಂದಕ್ಕೆ

ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಂಘ ನಿಯಮಿತದ ಆಡಳಿತ ಮಂಡಳಿಗೆ ಮೇ.26ರಂದು ನಡೆಯುವ ಚುನಾವಣಾ ಕಣದಿಂದ ತಾನು ಹಿಂದಕ್ಕೆ ಸರಿದಿರುವುದಾಗಿ ಸಂಘದ  ಹಾಲಿ ನಿರ್ದೇಶಕ ಜಯರಾಮ ರೈ ಬೋಳಂತೂರು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಕಣದಲ್ಲಿರುವ ತಾನು ಈ ಬಾರಿಯು ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು,ಸಹಕಾರ ಭಾರತಿಹಾಗೂ ಸಂಘ ಪರಿವಾರದ ಹಿರಿಯರ ಅಪೇಕ್ಷೆಯಂತೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವುದಾಗಿ ತಿಳಿಸಿದ್ದಾರೆ. ನಾಮಪತ್ರ ವಾಪಾಸು ಪಡೆಯುವ ಪ್ರಕ್ರಿಯೆ ಈಗಾಗಲೇ ಅಂತಿಮಗೊಂಡಿದ್ದು, ಬ್ಯಾಲೆಟ್ ಪತ್ರದಲ್ಲಿ ನನ್ನ ಹೆಸರು ದಾಖಲಾಗಿದ್ದು,ನಾನು ಕಣದಿಂದ ಹಿಂದೆ ಸರಿದಿರುವುದರಿಂದ ಮತದಾರರು ಗೊಂದಲಕ್ಕೊಳಗಾಗದೆ ಸಹಕಾರ ಭಾರತಿಯ ಬೆಂಬಲದೊಂದಿಗೆ ಸ್ಪರ್ಧಿಸುತ್ತಿರುವ ಉಮೇದ್ವಾರರಿಗೆ ತಮ್ಮ ಮತ ಚಲಾಯಿಸಿ ಬೆಂಬಲಿಸುವಂತೆ ಜಯರಾಮ ರೈ ಕೋರಿದ್ದಾರೆ.

More from the blog

9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿಗೆ ಪ್ರಭಾಕರ ಪ್ರಭು ಮನವಿ 

ಬಂಟ್ವಾಳ : ನೆನೆಗುದಿಗೆ ಬಿದ್ದಿರುವ 9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿ ಮಾಡಲು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್...

ವಿಟ್ಲ ಜಾತ್ರೆ ಅಂಗಡಿ ಏಲಂನಲ್ಲಿ ಭಾರೀ ಅವ್ಯವಹಾರದ ದೂರು..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಅಂಗಡಿ ಏಲಂನ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಕೆ. ಎಂಬವರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ. ಜಾತ್ರೆಗೆ ಸಂತೆ...

ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ ನೇಮಕ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗ, ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ, ಐಪಿಎಸ್ (ಕೆಎನ್ 2023) ನೇಮಿಸಲಾಗಿದೆ. ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆಗೆ ಸಹಾಯಕ ಪೊಲೀಸ್...

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...