Monday, July 14, 2025

*ಸಾಮರಸ್ಯದ ಬೀಜ ಬಿತ್ತುವ ಇಂತಹ ವಿದ್ಯಾರ್ಥಿ ಸಂಘಟನೆಗಳು ಸಮಾಜಕ್ಕೆ ಮಾದರಿ : ಶಿಕ್ಷಕಿ ಪ್ರೇಮಾ ಉದಯ ಕುಮಾರ್‌*

ಪಾಣೆಮಂಗಳೂರು ಸಲ್-ಸಬೀಲ್ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ ಸಲ್-ಸಬೀಲ್ ಎಕ್ಸಲೆನ್ಸ್ ಪ್ರಶಸ್ತಿಗೆ ಆಯ್ಕೆಯಾದ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿನ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಾ ಉದಯ್ ಕುಮಾರ್ ರವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸುಳ್ಯ ಐವರ್ನಾಡು ಶಾಲೆಯಲ್ಲಿ ಇತ್ತೀಚೆಗೆ ನಡೆಸಲಾಯಿತು.

ಪ್ರಶಸ್ತಿ ಪಡೆದು ಮಾತನಾಡಿದ ಅವರು “ಈಗ ಮೊಬೈಲ್ ಜಾಲ ತಾಣಗಳಲ್ಲಿ ಅವಕಾಶಗಳು ಹೆಚ್ಚು, ಅದನ್ನು ಸರಿಯಾಗಿ ಬಳಸಿಕೊಂಡು ತಮ್ಮ ಹವ್ಯಾಸಗಳನ್ನು ಹೆಚ್ಚಾಗಿ ವೃದ್ಧಿಸಿಕೊಳ್ಳಬಹುದು. ಸಾಮರಸ್ಯದ ಬೀಜ ಬಿತ್ತುವ ಇಂತಹ ಯುವ ಸಂಘಟನೆಗಳೇ ಸಮಾಜಕ್ಕೆ ಬೇಕಾದುದು ಹಾಗೂ ತನಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಬರೆದೆ ಎನ್ನುತ್ತಾ, ಭಾರತದ ಸಾಮರಸ್ಯದ ಪರಂಪರೆಯನ್ನು ಭವಿಷ್ಯದಲ್ಲಿ ಭದ್ರಗೊಳಿಸುವ ಬಗೆ” ಈ ವಿಷಯ ತುಂಬಾ ಪ್ರಸ್ತುತ ಹಾಗೂ ಸಕಾಲಿಕ, ಬರಹಗಾರರು ಇಂತಹ ಒಳ್ಳೆಯ ವಿಷಯಕ್ಕೆ ಸಮಾಜದಲ್ಲಿ ಸಂದೇಶ ನೀಡಲು ಸಹಾಯಕ ಹಾಗೂ ಅದು ಈಗಿನ ಕಾಲಕ್ಕೆ ಅಗತ್ಯ ಕೂಡಾ, ಈ ಅವಕಾಶವನ್ನು ಒದಗಿಸಿದ ಸಂಘಟನೆಗೆ ಕೃತಜ್ಞತೆ ಅರ್ಪಿಸಿದರು.

“ಸಲ್ – ಸಬೀಲ್ ಎನ್ನುವ ಈ ವಿದ್ಯಾರ್ಥಿ ಸಂಘಟನೆಯು ಯುವ ಮನಗಳ ವೇದಿಕೆಯಾಗಿದ್ದು , ಲೇಖನ ಸ್ಪರ್ಧೆಗಳಂತಹ ಉತ್ತಮ ಕಾರ್ಯಗಳನ್ನು ಮಾಡುತ್ತಾ ವಿದ್ಯಾರ್ಥಿಗಳು ಹಾಗೂ ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ” ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಸುಳ್ಯ ಇಲ್ಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಸೂಫಿ ಪೆರಾಜೆ ಅವರು ಮೆಚ್ಚುಗೆಯ ವ್ಯಕ್ತಪಡಿಸಿದರು.

ಸಂಘಟನೆಯ ಕಾರ್ಯಗಳ ಬಗ್ಗೆ ತಿಳಿದು ಹರ್ಷಿತರಾದ ಉಪನ್ಯಾಸಕ ಶ್ರೀಯುತ ಚಾರ್ಲ್ಸ್ ರವರು ಮಾತನಾಡಿ “ಈ ಸಂಘಟನೆಯು ಇನ್ನೂ ಉತ್ತಮ ಅವಕಾಶಗಳನ್ನು ಸಮಾಜಕ್ಕೆ ನೀಡಲಿ “ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಸಲ್ ಸಬೀಲ್ ಸಂಸ್ಥೆಯ ಪದಾಧಿಕಾರಿಗಳಾದ ನಜೀಬ್ ಬೋಗೋಡಿ, ಜಾಫರ್ ಬೋಗೋಡಿ, ಜಮಾಲ್ ಆಲಡ್ಕ, ರಾಶಿದ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕರಾದ ನಾರಾಯಣ ಬಿ. ಅವರು ವಂದಿಸಿ ಸಲ್-ಸಬೀಲ್ ಸಂಸ್ಥೆಯ ಉಪಾಧ್ಯಕ್ಷರಾದ ಉಬೈದ್ ಬೋಗೋಡಿ ನಿರೂಪಿಸಿದರು.

ಇದೇ ಸಂದರ್ಭ ಶಾಲೆಗೆ ನೆನಪಿನ ಕಾಣಿಕೆ ನೀಡಿ ಸಂಘಟನೆಯ ಪರವಾಗಿ ಗೌರವಿಸಲಾಯಿತು.

More from the blog

ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ..

ಪೊಳಲಿ: ವ್ಯಾಸ ಪೂರ್ಣಿಮೆಯನ್ನು ಗುರುಪೂರ್ಣಿಮೆಯಂದು ಹಿಂದಿನಿAದಲು ಜಗತಿನಾಧ್ಯಂತ ಆಚರಣೆಯನ್ನು ಮಠ ಆಶ್ರಮಗಳಲ್ಲಿ ಆಚರಿಸುತ್ತ ಬಂದಿರುತ್ತಾರೆ. ಹಿಂದುಗಳಿಗಲ್ಲದೆ ಬೇರೆ ಸಾಂಪ್ರದಾಯದವರಿಗೂ ವೀಶೇಷ ಗುರುಪೂರ್ಣಿಮೆದಿನವಾಗಿರುತ್ತದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮಿಜಿಯವರು...

ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

ಕೈಕಂಬ: ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು ೬ರಂದು ಭಾನುವಾರ ಪುಂಚಮೆ ಶ್ರೀ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತರಾದ ಪೊಳಲಿ...

ನೆಟ್ಲಮುಡ್ನೂರು : ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಜನಜಾಗೃತಿ ಅಭಿಯಾನ..

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ "ಜನಜಾಗೃತಿ ಅಭಿಯಾನ" ನೇರಳಕಟ್ಟೆಯಲ್ಲಿ ಶನಿವಾರ ಸಂಜೆ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವ...

ಶಕ್ತಿ ಯೋಜನೆಯ ಪ್ರಯಾಣಿಕರ ಸಂಖ್ಯೆ 500 ಕೋಟಿ ದಾಟಿದೆ – ಭರತ್ ಮುಂಡೋಡಿ..

ಬಂಟ್ವಾಳ: ಬಡವರ ಉದ್ಧಾರ, ಮಹಿಳಾ ಸ್ವಾವಲಂಬನೆಯ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ದ.ಕ.ಜಿಲ್ಲೆಯಲ್ಲಿ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳನ್ನು ಯೋಜನಾ ವ್ಯಾಪ್ತಿಗೆ ತರಲಾಗಿದೆ. ಪ್ರಸ್ತುತ ಶಕ್ತಿ ಯೋಜನೆಯ...