Tuesday, July 15, 2025

ಸರ್ವೀಸ್ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಪೋಲೀಸರಿಂದ ನಿರ್ಬಂಧ : ಆಟೋ ಚಾಲಕರು ಪೋಲೀಸರ ಮಧ್ಯೆ ವಾಗ್ವಾದ

ಬಂಟ್ವಾಳ: ಖಾಸಗಿ, ಸರಕಾರಿ ಬಸ್ ಗಳನ್ನು ಬಿ‌.ಸಿ‌.ರೋಡ್ ನ ಒಳರಸ್ತೆಗೆ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಬಿ.ಸಿ‌.ರೋಡ್-ಕೈಕಂಬ ಆಟೋ ರಿಕ್ಷಾ ಚಾಲಕರು ಸೋಮವಾರ ಇಲ್ಲಿನ ಮೇಲ್ಸೆತುವೆಯಲ್ಲಿ ದಿಢೀರನೆ ಪ್ರತಿಭಟನೆ ನಡೆಸಿದರು.
ಈ ಮೊದಲು ವಿವಿಧೆಡೆಯಿಂದ ಎಲ್ಲ ಬಸ್ ಗಳು ಬಿ‌.ಸಿ.ರೋಡ್ ನ ಜಂಕ್ಷನ್ ಗೆ ಬಂದು ತೆರಳುತ್ತಿದ್ದವು‌. ಇಲ್ಲಿನ ಪಕ್ಕದಲ್ಲಿ ಯೇ ಆಟೋ ರಿಕ್ಷಾ ತಂಗುದಾಣವಿದ್ದು , ಇದರಿಂದ ಆಟೊ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸುಲಭವಾಗುತ್ತಿತ್ತು.
ಆದರೆ, ಇದೀಗ ಯಾವುದೇ ಮಾಹಿತಿ ನೀಡದೇ ದಿಢೀರನೆ ಬಸ್ ಗಳ ಸಂಚಾರವನ್ನು ನಿರ್ಬಂಧಿಸಿರುವುದು ಸರಿಯಲ್ಲ. ಇದರಿಂದ ಆಟೋ ಚಾಲಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಟೊ ಚಾಲಕರು ದೂರಿಕೊಂಡರು.
ಬಳಿಕ ಆಟೊ‌ಚಾಲಕರು ಹೆದ್ದಾರಿ ಯಲ್ಲಿ ಬರುತ್ತಿದ್ದ ಬಸ್ ಗಳನ್ನು ತಡೆದು ನಿಲ್ಲಿಸಿ, ಬಿ.ಸಿ‌.ರೋಡಿನ ಕೆಳರಸ್ತೆಯಲ್ಲಿ ಸಂಚರಿಸುವಂತೆ ಮುಂದಾದಾಗ ಪೊಲಿಸರು ತಡೆವೊಡ್ಡಿದರು.

ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಬಂಟ್ವಾಳ ಕ್ರೈಂ ಎಸ್ಸೈ ಸುಧಾಕರ್ ಜಿ‌.ತೋನ್ಸೆ ಧಾವಿಸಿ, ಆಟೊ ಚಾಲಕರೊಂದಿಗೆ ಮಾತುಕತೆ ನಡೆಸಿದರು.
ಬಸ್ ಗಳ ಸಂಚಾರ ನಿರ್ಬಂಧಿಸಿದಕ್ಕೆ ಆಟೊ ಚಾಲಕರು ಒಮ್ಮತದಿಂದ ಆಕ್ಷೇಪ ವ್ಯಕ್ತಪಡಿಸಿದಾಗ, ಬಂಟ್ವಾಳ ಎಎಸ್ಪಿ ಅವರ ನಿರ್ದೇಶನ ಮೇರೆಗೆ ಬಿ.ಸಿ.ರೋಡ್ ಒಳರಸ್ತೆಯಲ್ಲಿ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಎಎಸ್ಪಿ ಅವರೊಂದಿಗೆ ಮಾತುಕತೆಗೆ ತೆರಳುವಂತೆ ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ಎಸ್ಸೈ ಸುಧಾಕರ್ ಅವರು ಚಾಲಕರಿಗೆ ತಿಳಿಸಿದರು.
ಬಳಿಕ ಆಟೊ ಚಾಲಕರು ಪ್ರತಿಭಟನೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಎಎಸ್ಪಿ ಕಚೇರಿಯತ್ತ ತೆರಳಿದರು.

More from the blog

ಒಡಿಯೂರು ಶ್ರೀ ಜನ್ಮದಿನೋತ್ಸವ ಸೇವಾ ಸಂಭ್ರಮದ ಅಂಗವಾಗಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

ವಿಟ್ಲ : ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಬದುಕಿನ ಉತ್ತುಂಗಕ್ಕೆ ಕಾರಣವಾಗುತ್ತದೆ. ಬದುಕು ಪೂರ್ತಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಋತುವಿಗನುಗುಣವಾಗಿ ಹಿತ, ಮಿತ ಆಹಾರ ಸೇವಿಸಿದಾಗ ಉತ್ತಮ ಆರೋಗ್ಯ ಪಡೆಯಬಹುದು...

ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ- ಮಾಣಿಲಶ್ರೀ

ವಿಟ್ಲ: ನಮ್ಮ ಕಣ್ಣುಗಳಿಗೆ ಕಾಣದಿರುವ ಶಕ್ತಿಯೇ ದೇವರು. ದೇವರನ್ನು ಬಿಟ್ಟು ನಾವು ಯಾವ ಕಾರ್ಯವನ್ನೂ ಮಾಡಿದರೂ ನಿಷ್ಪ್ರಯೋಜಕ. ಉಸಿರು ಇದ್ದಷ್ಟು ದಿನ ಲೋಕಹಿತ ಕಾರ್ಯ ಮಾಡಬೇಕು. ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು...

ನೈಸರ್ಗಿಕ ವಿಪತ್ತುಗಳಿಗೆ ಮೂಲ ಕಾರಣವೆ ಅರಣ್ಯ ನಾಶ : ಮನೋಜ್ ಮಿನೇಜಸ್ 

ಬಂಟ್ವಾಳ: ನೈಸರ್ಗಿಕ ವಿಪತ್ತುಗಳಿಗೆ  ಮೂಲ ಕಾರಣವೆ ಅರಣ್ಯನಾಶ. ಜಲ ನೆಲ ಪ್ರಾಣಿ ಸಂಕುಲಗಳು ದೇವರ ಆಸ್ತಿ ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ .ಕಳೆದ 5 ವರ್ಷಗಳಿಂದ...

B.C. ROAD : ಕೆಂಪುಕಲ್ಲು, ಮರಳು ಅಭಾವ : ಬಂಟ್ವಾಳ ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ..

ಬಂಟ್ವಾಳ: ಕೆಂಪುಕಲ್ಲು ಕಲ್ಲಿನ ರಾಜಧನವನ್ನು 40 ರೂ.ಗಳಿಂದ 280 ರೂ.ಗಳಿಗೆ ಏರಿಕೆ ಮಾಡಿರುವ ರಾಜ್ಯ ಸರಕಾರವು ಮರಳು ತೆಗೆಯುವ ಕಾನೂನನ್ನೂ ಸರಳಗೊಳಿಸದೆ ಜನರಿಗೆ ಕದಿಯಲು ಪ್ರೇರಣೆ ನೀಡುತ್ತಿದೆ. ಕೆಂಪು ಕಲ್ಲು ಹಾಗೂ ಮರಳಿನ...