Tuesday, February 3, 2026

ಪ್ರೀತಂ ಗೌಡ ಮನೆಯ ಮೇಲೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಬಂಟ್ವಾಳದಲ್ಲಿ ಪ್ರತಿಭಟನೆ

ಬಂಟ್ವಾಳ: ಕರ್ನಾಟಕ ರಾಜ್ಯ ಸಮ್ಮಿಶ್ರ ಸರಕಾರದ ದೌರ್ಜನ್ಯ ನೀತಿ, ಹಾಗು ಹಾಸನದ ಜನಪ್ರಿಯ ಶಾಸಕರಾದ ಪ್ರೀತಂ ಗೌಡ ಇವರ ಮನೆಯ ಮೇಲೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯಕರ್ತರು  ನಡೆಸಿದ ಹಲ್ಲೆಯನ್ನು ಖಂಡಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ರಾಜ್ಯ ಸಹವಕ್ತಾರೆ ಸುಲೋಚನಾ ಜಿ ಕೆ ಭಟ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಸಂದೇಶ್ ಶೆಟ್ಟಿ, ಜಿ ಆನಂದ, ಗೋಪಾಲ್ ಸುವರ್ಣ, ಹರೀಶ್ ರಾಯಿ, ಪುರುಷೋತ್ತಮ ಶೆಟ್ಟಿ, ರಮಾನಾಥ ರಾಯಿ, ಮಹೇಶ್ ಶೆಟ್ಟಿ,ಯಶೋಧರ ಕರ್ಬೆಟ್ಟು, ಜಿನರಾಜ್  ಮೊದಲಾದ ಪ್ರಮುಖರು ಭಾಗವಹಿಸಿದ್ದರು.

 

More from the blog

ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು. ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್...

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಸಂಸದ ಕ್ಯಾ. ಚೌಟ ಮನವಿ

ನವದೆಹಲಿ: ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ ('ಸಮುದ್ರ ತೀರದ ಪವನ ಶಕ್ತಿ' Offshore Wind Energy)...

ಅಂಗಡಿ, ಹೋಟೆಲ್ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ – ದರ್ಶನ್ ಎಚ್. ವಿ

ಮಂಗಳೂರು : ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿಗಳು ಹೋಟೇಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ...

Panemangaluru : ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರನಿಗೆ ಗಾಯ

ಬಂಟ್ವಾಳ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಸ್ಕೂಟರ್ ಸವಾರ ನರಿಕೊಂಬು ನಿವಾಸಿ ಮುಸ್ತಫಾ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಸ್ಕೂಟರ್ ಸವಾರ ಮುಸ್ತಫಾ ಅವರು ನರಿಕೊಂಬು ರಸ್ತೆಯಿಂದ...