ಬೆಳ್ತಂಗಡಿ: ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಯಾಗಿ ಬೆಳ್ತಂಗಡಿಯ ಪ್ರತಾಪಸಿಂಹ ನಾಯಕ್ ಆಯ್ಕೆಯಾಗಿದ್ದಾರೆ. ವಕೀಲರಾಗಿದ್ದ ಇವರು ನಂತರ ದ.ಕ. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾಗಿ, ಜಿಲ್ಲಾ ಬಿ.ಜೆ.ಪಿ. ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರತಾಪಸಿಂಹ ನಾಯಕ ಅವರಿಗೆ ಎಂ.ಎಲ್.ಸಿ. ಸ್ಥಾನ ದೊರಕಿಸಿ ಕೊಡುವ ಮೂಲಕ ಅವರ ಪಕ್ಷ ಸಂಘಟನೆ, ಅನುಭವಕ್ಕೆ ಆಧ್ಯತೆ ನೀಡಲಾಗಿದೆ.


