ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಬೈರಿಕಟ್ಟೆಯ ದಿವಂಗತ ಪೂವಪ್ಪ ಹಾಗೂ ಪದ್ಮಾವತಿ ದಂಪತಿಗಳ ಮಗನಾದ ಅಶೋಕ್ ಕುಮಾರ್ ಕೆಲವು ಕನ್ನಡ ಹಾಗು ತುಳು ನಾಟಕ ಗಳನ್ನು ರಚಿಸಿ ನಿರ್ದೇಶಿಸಿ ನಟಿಸಿ ಅಪಾರ ಜನ ಮೆಚ್ಚುಗೆ ಗಳಿಸಿದ್ದಾರೆ ಇವರು ಕೆಲವು ಸಂಘಟನೆಗಳಲ್ಲಿ ಒಬ್ಬ ಸಕ್ರಿಯ ಸದಸ್ಯನಾಗಿ ಸೇವೆ ಸಲ್ಲಿಸಿರುತ್ತಾರೆ ಸೌಹಾರ್ದ ಪ್ರೆಂಡ್ಸ್ ವೇದಿಕೆ ಬಂಟ್ವಾಳ ದ ಅದ್ಯಕ್ಷರಾಗಿ 2 ನೇ ಬಾರಿಗೆ ಆಯ್ಕೆಯಾಗಿರುತ್ತಾರೆ ಸಾವಿರಾರು ಜನರು ಇವರ ಕಲೆಗೆ ಪ್ರೋತ್ಸಾಹವನ್ನು ನಿಡಿರುತ್ತಾರೆ ಇವರ ಸೌಮ್ಯ ಸ್ವಬಾವ ಸರಳ ಸಜ್ಜನಿಕೆ ಹಾಗು ಕಲೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜ.19ರ ಶನಿವಾರ ಹುಬ್ಬಳ್ಳಿಯ ಮಿನಿ ವಿಧಾನ ಸೌಧದಲ್ಲಿ ಮಾನ್ಯ ಮುಖ್ಯಮಂತ್ರಿ ಹಾಗೂ ಗಣ್ಯ ಅಥಿತಿಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಸುವರ್ಣ ಕರ್ನಾಟಕ ಕಲಾ ಪ್ರಶಸ್ತಿ ನೀಡಿ ಸನ್ಮಾನಿಸಲಿದೆ.

