ಬಂಟ್ವಾಳ: ಜೂ.9ರಂದು ತುಮಕೂರಿನಲ್ಲಿ ಸ್ನೇಹಸಂಗಮ ಸಾಹಿತ್ಯ ಬಳಗದ ರಾಜ್ಯಮಟ್ಟದ ಕವಿಗೋಷ್ಠಿ, ಪುಸ್ತಕಬಿಡುಗಡೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಹಿರಿಯ ಕವಿ ಮತ್ತು ವಿಮರ್ಶಕರಾದ ಶ್ಯಾಮಸುಂದರ್ ರವರು ಸಮ್ಮೇಳನಾಧ್ಯಕ್ಷರಾಗಿ ಉಪಸ್ಥಿತರಿದ್ದರು.


ಈ ಸಂಧರ್ಭದಲ್ಲಿ ಸಾಹಿತ್ಯಕ್ಷೇತ್ರದಲ್ಲಿ ಅನವರತ ತೊಡಗಿಸಿಕೊಂಡ ಮೂಲತಃ ಬಂಟ್ವಾಳ ತಾಲೂಕಿನ ವಾಮದಪದವಿನ ಯುವ ಕವಿಯತ್ರಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಿಡುಬೆ, ಸುಳ್ಯ ತಾಲೂಕಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಮೀಳಾರಾಜ್ ಇವರಿಗೆ “ಕನ್ನಡ ಸಾಹಿತ್ಯ ಸ್ಪೂರ್ತಿ ರತ್ನ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ರತ್ನ ಬಡವನಹಳ್ಳಿ, ಸರಸ್ವತಿ, ಚಂದ್ರು ನಿಟ್ಟೂರು, ರಜನಿ ಮುಂತಾದ ಗಣ್ಯ ಕವಿಗಳು ಉಪಸ್ಥಿತರಿದ್ದು ಕರ್ನಾಟಕದ ಎಲ್ಲಾ ಜಿಲ್ಲೆಗಳ ಕವಿಗಳು ಸೇರಿ 400ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಭಾಗವಹಿಸಿದ್ದರು.