ಈ ಬಾರಿಯ ಭಾರತದ ಲೋಕಸಭಾ ಚುನಾವಣೆಯು ದೇಶದಲ್ಲಿ ಅಲ್ಲದೆ , ಜಗತ್ತಿನಾದ್ಯಂತ ಮಹಾಭಾರತದ ಶೈಲಿ ಧರ್ಮಯುದ್ಧ ವಾಗಿ ಪರಿಣಮಿಸಿದ್ದು , ಸಾತ್ವಿಕ ಗುಣವಂತ ದೇಶ ಕಂಡ ಧರ್ಮಿಷ್ಠ ,ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ಮತ್ತು ಬಿಜೆಪಿಯ’ ಸಂಕಲ್ಪ ಪತ್ರ’ ದಲ್ಲಿನ ಸೂತ್ರಗಳಿಂದ ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ಆಸೆಗಾಗಿ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಮತದಾರರು ಈ ಬಾರಿ ದೂರವಿಡಲು ತೀರ್ಮಾನಿಸಿದ್ದು, ಲೋಕಸಭಾ ಚುನಾವಣೆಯಲ್ಲಿ , ರಾಜ್ಯದಲ್ಲಿ ಜೆಡಿಎಸ್ ಗೆ ಶೂನ್ಯ ಫಲಿತಾಂಶ ಲಭಿಸಲಿದ್ದು, ಕಾಂಗ್ರೆಸ್ ಕೇವಲ ಮೂರರಿಂದ ನಾಲ್ಕು ಸ್ಥಾನಕ್ಕೆ ತಳ್ಳಲ್ಪಟ್ಟು ಹೀನಾಯ ಸೋಲು ಅನುಭವಿಸಲಿದೆ. ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಚುನಾವಣಾನಿರ್ವಹಣ ಸಮಿತಿ ಯ, ಮಾಧ್ಯಮ ಸಮನ್ವಯ ಪ್ರಮುಖ್ ಹಾಗೂ ತಾಲೂಕ ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ
ಜಗತ್ತಿನ ಎಲ್ಲಾ ದೇಶಗಳಿಂದಲೂ ಗೌರವಕ್ಕೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿದ ಸಂಕಲ್ಪ ಪತ್ರದಲ್ಲಿ ತಿಳಿಸಿದಂತೆ, ವಾಜಪೇಯಿ ಅವರ ಕನಸಿನ“ಸಮಾನ ನಾಗರಿಕ ಕಾನೂನು ಜಾರಿ “ಜಮ್ಮು-ಕಾಶ್ಮೀರಕ್ಕೆ ನೀಡಿದ (370ನೇ ವಿಧಿ) ವಿಶೇಷ ರಾಜ್ಯದ ಸ್ಥಾನಮಾನ ರದ್ದು,” ಜಮ್ಮು-ಕಾಶ್ಮೀರದಲ್ಲಿ ಇತರರಿಗೆ ಭೂಮಿ ಖರೀದಿಗೆ ಇರುವ ( 35 ಎ) ನಿಷೇಧ ರದ್ದು “ಸವಿಂದಾನ ವ್ಯಾಪ್ತಿಯೊಳಗೆ ರಾಮ ಮಂದಿರ ನಿರ್ಮಾಣ” ಸೇನಾ ಪಡೆಗಳಿಗೆ ಪೂರ್ಣ ಅಧಿಕಾರ” ರೈತರಿಗೆ ಪಿಂಚಣಿ ಯೋಜನೆ” ಜಿಎಸ್ಟಿ ಸರಳಿಕರಣ” ಐದು ಕಿಲೋಮೀಟರ್ ಒಂದರಂತೆ ಸ್ಥಳೀಯ ಮಟ್ಟದಲ್ಲಿ ಬ್ಯಾಂಕಿಂಗ್ ಸೌಲಭ್ಯ” ಸಣ್ಣಮತ್ತು ಮಧ್ಯಮ ಕೈಗಾರಿಕೆಗಳಿಗೆ ಒತ್ತು “ವಿಶೇಷವಾಗಿ 2047 ಕೆ ಭಾರತ ಸ್ವಾತಂತ್ರ್ಯ ಪಡೆದು ಶತಮಾನೋತ್ಸವ, ಆಚರಣೆ ಸಂದರ್ಭ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಸುವುದು…. ದೇಶ ಸೇವಕರಿಗೆ ಹೆಮ್ಮೆ ತಂದಿದೆ. ಈ ನಿಟ್ಟಿನಲ್ಲಿ ಕಳೆದ 10 ತಿಂಗಳಿಂದ ಸರಕಾರದಿಂದ ಲಭಿಸುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು , ಜನಸಾಮಾನ್ಯರ, ಪ್ರತಿಯೊಂದು ಸಮಸ್ಯೆಗಳಿಗೆ ತನ್ನ ಇತಿಮಿತಿಯಲ್ಲಿ ಸ್ಪಂದಿಸುವ, ಚಿತ್ರದ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಕೆಲಸ ಕಾರ್ಯ ಮೆಚ್ಚುವಂತದ್ದು. ಅಲ್ಲದೆ ಜಿಲ್ಲೆಗೆ ಅದೆಷ್ಟು ಕೋಟಿ ಕೋಟಿ ಅನುದಾನವನ್ನು ತಂದು ಜನ ಮೆಚ್ಚುಗೆ ಗಳಿಸಿದ ಬಿಜೆಪಿಯ ದಕ್ಷ ಅಭ್ಯರ್ಥಿ ನವೀನ್ ಕುಮಾರ್ ಕಟೀಲ್ ರವರಿಗೆ ಮತವನ್ನು ನೀಡುವ ಮುಖಾಂತರ ಮತ್ತೊಮ್ಮೆ ಕರಾವಳಿಯಲ್ಲಿ ಕಮಲ ಅರಳಿಸಿ, ಮೋದಿ ಅವರನ್ನು ಮತ್ತೊಮ್ಮೆ ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಮುಖಾಂತರ ಭಾರತ ಜಗದ್ಗುರು ವಾಗುವ ಕೈಂಕರ್ಯದಲ್ಲಿ, ನಾವೆಲ್ಲ ತೊಡಗಿಸಿಕೊಳ್ಳೋಣ ಇಂದು ಮತದಾರ ಬಾಂಧವರಲ್ಲಿ ಪತ್ರಿಕಾ ಹೇಳಿಕೆ ಮುಖಾಂತರ ವಿನಂತಿಸಿದ್ದಾರೆ.