ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಾಷ್ರ್ಟೀಯ ಪೋಷಣೆ ಅಭಿಯಾನ್ ಕಾರ್‍ಯಕ್ರಮ ನಡೆಸಲಾಯಿತು. ಸಜೀಪದ ಮಾಚಿದೇವ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ| ಸುಬ್ರಹ್ಮಣ್ಯ ಭಟ್ ಆಯುರ್ವೆದ ತಜ್ಞರು ಇವರು ಸಮತೋಲಿತ ಆಹಾರದ ಮಾಹಿತಿ ನೀಡಿ ಅಪೌಷ್ಟಿಕತೆ ನಿವಾರಣೆಗೆ ನಮ್ಮಲ್ಲಿಯೇ ದೊರೆಯುವ ಸಮತೋಲಿತ ಆಹಾರದ ಅಗತ್ಯತೆ ಬಗ್ಗೆ ಮಾತನಾಡಿದರು. 40 ಮಹಿಳೆಯರು ಉಪಸ್ಥಿತರಿದ್ದರು.


ನೆಟ್ಲ ಸರಸ್ವತಿ ಸದನದಲ್ಲಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಆಯುರ್ವೇದ ವೈದ್ಯೆಡಾ| ಸಿಂಧು ಶ್ರೀ ಇವರು ಅಪೌಷ್ಟಿಕತೆ ನಿವಾರಿಸಲು ಯಾವಯಾವ ಆಹಾರಗಳನ್ನು ಮಕ್ಕಳು ಮತ್ತು ಮಹಿಳೆಯರು ಸೇವಿಸಬೇಕೆಂಬ ಸಂಪೂರ್ಣ ಮಾಹಿತಿಯನ್ನು ನೀಡಿದರು. ಮಕ್ಕಳು ಮತ್ತು ಮಹಿಳೆಯರು ಸೇರಿ 42 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದರಾಷ್ರ್ಟೀಯ ಪೋಷಣ್‌ಅಭಿಯಾನ್‌ಕಾರ್ಯಕ್ರಮವನ್ನುಡಾ| ಸಂದೀಪ್.ಎಚ್.ಎಸ್. ಮಕ್ಕಳ ತಜ್ಞರು,ಹಾಗೂ ಡಾ| ಅನನ್ಯ ಲಕ್ಷ್ಮೀ ಸಂದೀಪ್‌ಇವರು ನಡೆಸಿಕೊಟ್ಟರು. ಗರ್ಭಿಣಿ ಸ್ತ್ರೀಯರು, ಸಣ್ಣ ಮಕ್ಕಳು, ಮಹಿಳೆಯರಲ್ಲಿ ಅಪೌಷ್ಟಿಕತೆಯಾಕೆ ಬರುತ್ತವೆ ಮತ್ತು ಹೋಗಲಾಡಿಸಲುಯಾವ ಆಹಾರಗಳನ್ನು ಸೇವಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ೬೦ ಮಂದಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿಭಾಗಾವಹಿಸಿರುವ ಎಲ್ಲರಿಗೂರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಯಾರಿಸಿಕೊಳ್ಳಬಹುದಾದಕಷಾಯದಬಗ್ಗೆ ಪ್ರಾತ್ಯಕ್ಷಿಕೆ ಮಾಡಿ, ನಂತರಎಲ್ಲರಿಗೂಕುಡಿಯಲುಕಷಾಯ ನೀಡಲಾಯಿತು.
ಕಾರ್‍ಯಕ್ರಮದಲ್ಲಿರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತಕಾರ್ಯಕಾರಿಣಿ ಸದಸ್ಯೆಯಾಗಿರುವಡಾ| ಕಮಲಾ ಭಟ್ ಹಾಗೂ ಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯೆ ಹಿರಣ್ಮಯಿ, ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ಶೈಕ್ಷಣಿಕ ಪರಿವೀಕ್ಷಕರು ಸುಧಾ ಭಟ್ ಮುಖ್ಯೋಪಾಧ್ಯಾಯರರಾದ ಶಾಂಭವಿ ಹಾಗೂ ಅಧ್ಯಾಪಕ ವೃಂದದವರು ಪಾಲ್ಗೊಂಡರು.

