ಬಂಟ್ವಾಳ: ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಸುವರ್ಣ ತುಂಬೆ ಇವರ ಅನುದಾನದಲ್ಲಿ (ಒಂದು ಲಕ್ಷ ಹತ್ತು ಸಾವಿರ) ಮುಳಿಪಡ್ಪು, ತುಂಬೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೂತನವಾದ ತೆರೆದ ಬಾವಿಗೆ ಗುದ್ದಲಿ ಪೂಜೆ ನಡೆಯಿತು.


ಹಿರಿಯರಾದ ತಿಮ್ಮಪ್ಪ ಬೆಳ್ಚಾಡ, ಮುಳಿಪಡ್ಪು ಇವರು ತೆಂಗಿನ ಕಾಯಿ ಒಡೆಯುವುದರ ಕೆಲಸಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಸುವರ್ಣ ತುಂಬೆ, ಗ್ರಾಮ ಪಂಚಾಯತ್ ಸದಸ್ಯರಾದ ಹೇಮಲತಾ ಜಿ ಪೂಜಾರಿ, ಅರುಣ್ ಕುಮಾರ್ ಗಾಣದಲಚ್ಚಿಲು, ಕಿಶೋರ್ ರಾಮಲ್ ಕಟ್ಟೆ, ಜಯಂತಿ ಶ್ರೀಧರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಬೊಳ್ಳಾರಿ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷೆ ಜಲಜಾಕ್ಷಿ ಕೋಟ್ಯಾನ್, ಕಂಟ್ರಾಕ್ಟರ್ ಪ್ರಶಾಂತ್ ಕೊಟ್ಟಾರಿ, ಹಿರಿಯರಾದ ಐತ್ತಪ್ಪ ಕುಲಾಲ್ ಮುದಲ್ಮೆ, ಪ್ರದೀಪ್ ಕುಮಾರ್ ಮುದಲ್ಮೆ, ಲಕ್ಷ್ಮಣ ಪೂಜಾರಿ ಬೊಳ್ಳಾರಿ, ತಿಮ್ಮಪ್ಪ ಬೆಳ್ಚಾಡ ಮುಳಿಪಡ್ಪು, ದಿನೇಶ್ ಮಜಿ, ಪ್ರವೀಣ್ ಕೊಟ್ಟಿಂಜ, ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೋಟ್ಯಾನ್, ಹಿಂದೂ ಜಾಗರಣಾ ವೇದಿಕೆ ತುಂಬೆ ವಲಯ ಅಧ್ಯಕ್ಷ ವಿಜಯ್ ಕುಮಾರ್ ಕಜೆಕಂಡ, ಬಿಜೆಪಿ ತುಂಬೆಯ ಬೂತ್ ಅಧ್ಯಕ್ಷರುಗಳಾದ ಗೋಪಾಲ್ ಬೆದ್ರಾಡಿ, ಸದಾನಂದ ಕೋಡಿಯಡ್ಕ, ಶ್ರವಣ್ ಬೊಳ್ಳಾರಿ, ಸೋಮಶೇಖರ ಪರ್ಲಕ್ಕೆ, ಕಾರ್ಯದರ್ಶಿಗಳಾದ ಕೇಶವ ಬೊಳ್ಳಾರಿ, ಅನೀಶ್ ಪರ್ಲಕ್ಕೆ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಯುವರಾಜ್, ಯುವಮೋರ್ಚಾ ಸಂಚಾಲಕ ವಿಜಯ್ ಬೊಳ್ಳಾರಿ, ಮೋಹನ್ ದಾಸ್ ಪರ್ಲಕ್ಕೆ ಸೇರಿದಂತೆ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

