Saturday, January 31, 2026

ಪೂಜಾರಿ – ಡಿ.ಕೆ.ಶಿ. ಭೇಟಿ: ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ..

ಬಂಟ್ವಾಳ: ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜುಲೈ 31 ರಂದು ಶುಕ್ರವಾರ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರನ್ನು ಬೇಟಿ ಮಾಡಲಿದ್ದಾರೆ ಎಂಬ ಅಧಿಕೃತ ಮಾಹಿತಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಕಟನೆಯ ಲ್ಲಿ ತಿಳಿಸಿದೆ.
ಕೆ.ಪಿ.ಸಿ.ಸಿ.ಅಧ್ಯಕ್ಷ ರಾದ ಬಳಿಕ ಪ್ರಥಮವಾಗಿ ಜಿಲ್ಲೆಗೆ ಅಗಮಿಸುವ ಡಿ.ಕೆ.ಶಿವಕುಮಾರ್ ಮಂಗಳೂರು ಕಾಂಗ್ರೆಸ್ ಕಚೇರಿ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಕ್ಕೂ ಬೇಟಿ ನೀಡಲಿದ್ದಾರೆ.
*ಕಾಂಗ್ರೆಸ್ ಸಂಚಲನ*
ಹಿರಿಯ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಸಾಲ ಮೇಳದ ರೂವಾರಿ ಬಿ.ಜನಾರ್ಧನ ಪೂಜಾರಿ ಅವರನ್ನು ಬೇಟಿ ಮಾಡಿ ಅವರ ಜೊತೆಗೆ ಮಾತುಕತೆ ನಡೆಸಲಿರುವ ಡಿ.ಕೆ.ಶಿ.
ಪೂಜಾರಿ ಜೊತೆಗಿನ ಮಾತುಕತೆ ರಾಜಕೀಯ ವಲಯದಲ್ಲಿ ಬಾರೀ ಬಿರುಗಾಳಿ ಎಬ್ಬಿಸಲಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ.
ಅನೇಕ ವರ್ಷಗಳಿಂದ ಕಾಂಗ್ರೇಸ್ ಮತ್ತು ಪೂಜಾರಿ ಜೊತೆಗಿನ ಸಂಬಂಧ ಅಷ್ಟಕಷ್ಟೆ ಎಂಬಂತೆ ಇತ್ತು.
ಅದಕ್ಕೆ ಸಾಕ್ಷಿ ಹಿಂದಿನ ಮುಖ್ಯಮಂತ್ರಿ ಯಾಗಿದ್ದ ಸಿದ್ದ ರಾಮಯ್ಯ ಅವರು ಬಂಟ್ವಾಳ ಕ್ಕೆ ವಿವಿಧ ಕಾಮಗಾರಿ ಗಳ ಉದ್ಘಾಟನೆ ಗೆಂದು ಆಗಮಿಸಿದ ವೇಳೆ ಪೂಜಾರಿ ಮನೆಯ ಬಾಗಿಲಿನಲ್ಲಿ ಹೋದರೂ ಪೂಜಾರಿ ಮನೆಗೆ ಬೇಟಿ ನೀಡದೆ ಹೋಗಿರುವುದು.
ಅಬಳಿಕ ಪೂಜಾರಿ ಅವರ ಜೊತೆ ಜಿಲ್ಲಾ ಕಾಂಗ್ರೆಸ್ ನಡೆದು ಕೊಂಡ ಬಂದ ರೀತಿ ಎಲ್ಲವೂ ಪೂಜಾರಿ ಕಡೆಗಣನೆಗೆ ಸಾಕ್ಷಿಯಾಗಿತ್ತು.
ಇದೀಗ ಡಿ.ಕೆ.ಶಿ ಅಧ್ಯಕ್ಷ ರಾಗಿ ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಬಂಟ್ವಾಳ ಕ್ಕೆ ಆಗಮಸುವ ವೇಳೆ ಪೂಜಾರಿ ಬೇಟಿ ಇಟ್ಟುಕೊಂಡಿರುವುದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಡಿ.ಕೆ.ಶಿ ಪೂಜಾರಿ ಬೇಟಿ ರಾಜಕೀಯ ಚಿತ್ರಣವನ್ನು ಬದಲು ಮಾಡೀತೇ ? ಯಾವುದಕ್ಕೂ ಕಾದುನೋಡೋಣ….

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...