ಬಂಟ್ವಾಳ: ಹಿರಿಯ ಕಾಂಗ್ರೇಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರು ಎಸ್.ವಿ.ಎಸ್.ದೇವಳ ಶಾಲೆಯಲ್ಲಿ ಮತಚಲಾಯಿಸಿದರು.

ಅವರು ಪತ್ನಿ ಮಾಲತಿ ಪೂಜಾರಿ ಜೊತೆ ಸುಮಾರು 6.30 ರ ವೇಳೆ ಆಗಮಸಿ ಸರತಿ ಸಾಲಿನಲ್ಲಿ ನಿಂತು ಪ್ರಥಮ ವಾಗಿ ಹಕ್ಕು ಚಲಾಯಿಸಿದರು.
ಬಳಿಕ ಮಾತನಾಡಿದ ಅವರು ರಾಹುಲ್ ಗಾಂಧಿ ಅವರು ಪ್ರಧಾನಿ ಯಾಗಬೇಕು ಎಂಬ ಇಚ್ಚೆ ಯನ್ನು ವ್ಯಕ್ತಪಡಿಸಿದರು. ಆದರೆ ಎಲ್ಲವೂ ದೇವರ ಇಚ್ಚೆ ಎಂದರು.
ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು.
ಕಳೆದ ಹಲವು ವರ್ಷಗಳಿಂದ ಪೂಜಾರಿ ಅವರು ಸರತಿ ಸಾಲಿನಲ್ಲಿ ನಿಂತು ಪ್ರಥಮ ಮತಚಲಾಯಿಸುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಇಂದು ಕೂಡಾ ಪ್ರಥಮ ವಾಗಿ ಮತ ಚಲಾಯಿಸಿದರು.