ಬಂಟ್ವಾಳ: 2019ನೇ ಸಾಲಿನ ಬಂಟ್ವಾಳ ತಾಲೂಕು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರಹಾಸ ಕರ್ಕೇರಾ, ಅಧ್ಯಕ್ಷರು ತಾಲೂಕು ಪಂಚಾಯತ್ ಬಂಟ್ವಾಳ ಇವರು ಪೋಲಿಯೋ ಹನಿಯನ್ನು ಮಕ್ಕಳಿಗೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಅಬ್ಬಾಸ್ ಆಲಿ, ಡಾ| ವಸಂತ ಬಾಳಿಗಾ ಲಯನ್ಸ್ ಕ್ಲಬ್, ಡಾ| ಸದಾಶಿವ್ ಶ್ಯಾನುಭೋಗ್ ಆಡಳಿತ ವೈದ್ಯಾಧಿಕಾರಿ ತಾಲೂಕು ಆಸ್ಪತ್ರೆ ಬಂಟ್ವಾಳ, ಡಾ| ಸುರೇಂದ್ರನಾಥ್ ನಾಯ್ಕ್ ತಜ್ಞ ವೈದ್ಯರು ತಾಲೂಕು ಆಸ್ಪತ್ರೆ ಬಂಟ್ವಾಳ ಇವರು ಉಪಸ್ಥಿತರಿದ್ದರು. ಡಾ| ದೀಪಾಪ್ರಭು ಸ್ವಾಗತಿಸಿ ಕಾರ್‍ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ
ಬಂಟ್ವಾಳ : ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೊ ನಿರ್ಮೂಲನೆಗೆ ರೋಟರಿ ಶ್ರಮಿಸುತ್ತಿದೆ ಎಂದು ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ ಹೇಳಿದರು.
ಅವರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಬಿ ಸಿ ರೋಡಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ 5 ತಿಂಗಳ ಮಗು ತಶ್ವಿಕಾ ಳಿಗೆ ಪೋಲಿಯೊ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗ ವಿಕಲತೆ- ಜೀವ ಹಾನಿ ಮಾಡುವ ಮಾರಕ ಪೋಲಿಯೊ ನಿಯಂತ್ರಣ ಮಾಡುವಲ್ಲಿ ಕಳೆದ 2 ದಶಕಗಳ ರೋಟರಿ ಶ್ರಮದ ಫಲವಾಗಿ ವಿಶ್ವದಾದ್ಯಂತ ಪಾಕಿಸ್ತಾನ-ಅಫ್ಘಾನಿಸ್ಥಾನ ಹೊರತುಪಡಿಸಿ ಶೂನ್ಯ ಕ್ಕೆ ತರಲಾಗಿದೆ ಹಾಗೂ ಪೋಷಕರು ಮಕ್ಕಳಿಗೆ ಲಸಿಕೆ ನೀಡುವಲ್ಲಿ ಅಲಕ್ಷ್ಯ ಮಾಡದೆ ಯೋಜನೆ ಸದುಪಯೋಗ ಮಾಡಬೇಕಿದೆ ಎಂದರು .ಕಾರ್ಯಕ್ರಮದಲ್ಲಿರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಬಂಗೇರ, ಪದಾಧಿಕಾರಿಗಳಾದ ದಯಾನಂದ ಶೆಟ್ಟಿ, ಮಹಮ್ಮದ್ ಹನೀಫ್,ಮಹಮ್ಮದ್ ಮುನೀರ್, ಪ್ರಕಾಶ್ ಆಳ್ವಾ, ಕಿಶೋರ್ ಕುಮಾರ್, ಸವಿತಾ ನಿರ್ಮಲ್, ಮನಿಷಾ ಜಯರಾಜ್ ಉಪಸ್ತಿತರಿದ್ದರು.