ಪೊಲೀಸರೇ ನಿಮಗಿದೋ ಹ್ಯಾಟ್ಸಾಪ್

ಬಂಟ್ವಾಳ : ಕೊರೋನಾ ವೈರಸ್ ನ ಹರಡುವಿಕೆಯನ್ನು ತಡೆಯಲು ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಹೋರಾತ್ರಿ ಶ್ರಮಿಸುತ್ತಿದ್ದರೆ, ಇದಕ್ಕೆ ಬೆಂಬಲವಾಗಿ ನಿಂತಿರುವ ಮತ್ತೊಂದು ಪ್ರಮುಖ ಇಲಾಖೆ ಪೊಲೀಸ್ ಇಲಾಖೆ.



ಕಾನೂನು ಸುವ್ಯವಸ್ಥೆ ಯ ಜೊತೆಗೆ ನಾಗರೀಕರಿಗೆ ರಕ್ಷಣೆ ನೀಡಬೇಕಾದ ಮಹತ್ತರ ಜವಬ್ದಾರಿ ಹೊತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಇದೀಗ ತಮ್ಮ ಜೀವವನ್ನೂ ಲೆಕ್ಕಿಸದೇ ನಾಗರೀಕರಿಗೆ ಆರೋಗ್ಯ ದ ಪಾಠ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ 21 ದಿನಗಳ ಕಾಲ ಇಡೀ ಭಾರತಕ್ಕೆ ಲಾಕ್ ಡೌನ್ ಘೋಷಿಸಿದ್ದರೂ, ಅದನ್ನು ಲೆಕ್ಕಿಸದೇ ತನ್ನ ಆರೋಗ್ಯದ ಕಾಪಾಡುವ ಬದಲಾಗಿ ಕಾನೂನು ಉಲ್ಲಂಘಿಸಿ ಜನರು ಮನೆಯಿಂದ ಪೇಟೆ ಗೆ ಬರುವುದು ತಪ್ಪಿಲ್ಲ, ಪೋಲೀಸರ ಜೊತೆ ಒರಟಾಗಿ ನಡವಳಿಕೆ ಮಾಡುವುದು ನಿಂತಿಲ್ಲ.
ಪ್ರಸ್ತುತ ಇಡೀ ರಾಜ್ಯದಲ್ಲಿ ಪೋಲೀಸರ ಪಾತ್ರ ಮಹತ್ತರ ವಾಗಿದೆ.
ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯ ವನ್ನು ಲೆಕ್ಕಿಸದೆ ಅಹೋರಾತ್ರಿ ಜನರ ಆರೋಗ್ಯಕ್ಕಾಗಿ ಲಾಠಿ ಹಿಡಿದು ರಸ್ತೆಯಲ್ಲಿ ನಿಂತು ಸಾರ್ವಜನಿಕ ರಿಗೆ ನೀತಿ ಪಾಠ ಮಾಡುವ ರೀತಿ ಎಲ್ಲರ ಪ್ರಶಂಸೆ ಗೆ ಪಾತ್ರವಾಗಿದೆ.
ಅವರಿಗಾಗಿ ಅವರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪರಿಶ್ರಮ ಪಡುತ್ತಿಲ್ಲ, ಇಡೀ ಸಮಾಜದ ಆರೋಗ್ಯದ ಉದ್ದೇಶದಿಂದ, ಕೊರೊನೊ ಎಂಬ ಮಾಹಾಮಾರಿಯಿಂದ ದೇಶವನ್ನೇ ಬಚಾವ್ ಮಾಡುವ ಒಂದೇ ಒಂದು ಉದ್ದೇಶದಿಂದ.
ಕೊರೊನೊ ದಿಂದ ಮುಕ್ತಿಗಾಗಿ ಪ್ರಧಾನಿ ಮಂತ್ರಿ ಹೋಂಸ್ಟೇ ಎಂದು ಸಾರಿ ಸಾರಿ ಮನವಿ ಮಾಡಿದರೂ ಯಾರು ಕೇಳಿಸಿಕೊಂಡಿಲ್ಲ ಅಂದರೆ ವಿಪರ್ಯಾಸ.
ಪ್ರತಿ ಜಿಲ್ಲಾಡಳಿತ ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವುದು ಬೇಡ ಅಂದರೂ ಪ್ರತಿ ದಿನ ಮಾರುಕಟ್ಟೆಯಲ್ಲಿ ತುಂಬಿ ತುಳುಕುವ ಜನರು.
ಈ ರೀತಿಯಾದರೆ ಪರಿಸ್ಥಿತಿ ಕಂಟ್ರೋಲ್ ಅಗಬಹುದೇ ಕೊರೊನೊ ದಿಂದ ಮುಕ್ತಿ ಸಿಗಬಹುದೆ ಜನ ಅಲೋಚಿಸಬೇಕಾದ ಕಾಲಘಟ್ಟದಲ್ಲಿದ್ದೇವೆ.
ಪೋಲೀಸರು ನಿದ್ದೆ ಬಿಟ್ಟು , ಊಟ ಬಿಟ್ಟು, ಕುಟುಂಬ ಬಿಟ್ಟು, ಕೊನೆಯದಾಗಿ ಅವರ ಜೀವವನ್ನು ಅಪಾಯ ದಲ್ಲಿರಿಸಿ ಜನರಿಗೆ ಸಾಮ ,ದಾನ, ಕೊನೆಗೆ ದಂಡ ಎಂಬುದನ್ನು ತೋರಿಸಬೇಕಾ, ಕರಾವಳಿಯ ಜನರು ಬುದ್ದಿವಂತರು ಎಂಬ ಪಟ್ಟವಿದೆ. ಅದನ್ನು ಉಳಿಸಿ ಈ ಜಿಲ್ಲೆಯ ನ್ನು ಉಳಿಸಲು ಎಲ್ಲಾ ಸಾರ್ವಜನಿಕರು ಇಲಾಖೆಯ ಜೊತೆ ಸಹಕಾರ ನೀಡೋಣ.
ಹಾಗಾಗಿ ಅವರ ನಿಜವಾದ ಕಾಳಜಿ ಗೆ ನಾವು ಕೈಜೋಡಿಸಿ ಹ್ಯಾಟ್ಸ್ ಅಪ್ ಎನ್ನೋಣ .

