Tuesday, July 8, 2025

ಬಂಟ್ವಾಳ ನಗರಕ್ಕೆ ಅವಿನಾಶ್, ಟ್ರಾಫಿಕ್ ಗೆ ಮಂಜುಳಾ ನಿಯುಕ್ತಿ

ಬಂಟ್ವಾಳ, ಅ. 23: ರಾಜ್ಯದ 47 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವರ್ಗಿಗೊಳಿಸಿ ಸರಕಾರ ಆದೇಶ ಹೊರಡಿಸಲಾಗಿದೆ.


ಬಂಟ್ವಾಳ ತಾಲೂಕಿನ ಎರಡು ಠಾಣೆಯ ಮೂವರು ಸಬ್‌ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಿ ಎಂದು ಆದೇಶ ಹೊರಡಿಸಿದೆ. ಬಂಟ್ವಾಳ ನಗರ ಠಾಣೆಯ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಇಬ್ಬರು ಎಸ್ಸೈಗಳನ್ನು ಮತ್ತು ವಿಟ್ಲ ಠಾಣೆಯ ಪಿಎಸ್ಸೈಯನ್ನು ವರ್ಗಾವಣೆ ಮಾಡುವ ಮೂಲಕ ದ.ಕ. ಜಿಲ್ಲೆಯ ವಿವಿಧೆ ಠಾಣೆಯ ವರ್ಗಾವರ್ಗಿಗೊಳಿಸಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಸೈ ಚಂದ್ರಶೇಖರ್ ಅವರನ್ನು ವರ್ಗಾವಣೆಗೊಳಿಸಿ, ಧರ್ಮಸ್ಥಳ ಠಾಣೆಯ ಎಸ್ಸೈ ಅವಿನಾಶ್ ಅವರನ್ನು ಬಂಟ್ವಾಳ ನಗರ ಠಾಣೆಯ ಕಾನೂನು ಸುವ್ಯವಸ್ಥೆಗೆ ನಿಯುಕ್ತಿಗೊಳಿಸಲಾಗಿದೆ‌.
ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಸುಧಾಕರ ತೋನ್ಸೆ ಅವರನ್ನು ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಹಾಗೂ ವಿಟ್ಲ ಠಾಣೆಯ ಎಸ್ಸೈ ಯಲ್ಲಪ್ಪ ಅವರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ, ದ.ಕ.ಜಿಲ್ಲೆಯ ಡಿಎಸ್ಬಿ ಘಟಕದ ಎಸ್ಸೈ ಆಗಿದ್ದ ಮಂಜುಳಾ ಕೆ‌.ಎಂ. ಅವರನ್ನು ಮರಳಿ ಬಂಟ್ವಾಳ ಟ್ರಾಫಿಕ್ ಠಾಣೆಗೆ ನಿಯುಕ್ತಿಗೊಳಿಸಿ ಎಂದು ಆದೇಶ ಹೊರಡಿಸಿದೆ.
ಬಂಟ್ವಾಳ ನಗರ ಠಾಣೆಯ ಎಸ್ಸೈ ಚಂದ್ರಶೇಖರ್ ಅವರಿಗೆ ಸ್ಥಳ ಸೂಚಿಸಿಲ್ಲ ಹಾಗೂ ವಿಟ್ಲ ಠಾಣೆ, ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗಕ್ಕೆ ಯಾರನ್ನು ನಿಯುಕ್ತಿಗೊಳಿಸಲಾಗಿಲ್ಲ‌.

More from the blog

ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ – ವಾರ್ಷಿಕ ಮಹಾಸಭೆ

ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತವು 2024 -25 ನೇ ಸಾಲಿನಲ್ಲಿ 371 ಲಕ್ಷ ರೂ.ವ್ಯವಹಾರ ನಡೆಸಿ 20.37 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ...

ಪ್ರೀಮಾ ಡಿಸೋಜರವರಿಗೆ ಪಿಎಚ್. ಡಿ. ಪದವಿ..

ಬಂಟ್ವಾಳ : ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ....

ನಾಗಶ್ರೀ ಮಿತ್ರ ವೃಂದ : ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶೈಲೇಶ್ ಈಶನಗರ ಆಯ್ಕೆ..

ಬಂಟ್ವಾಳ : ಚಾರಿಟೇಬಲ್ ಟ್ರಸ್ಟ್ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶ್ರೀ ಶೈಲೇಶ್ ಈಶನಗರ ಆಯ್ಕೆಯಾಗಿದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಂಜಿತ್ ಕಮ್ಮಾಜೆ,...

ಅಕ್ರಮವಾಗಿ ಮಧ್ಯ ದಾಸ್ತಾನು ಇರಿಸಿ ಮಾರಾಟ : ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರಿಂದ ದಾಳಿ..

ಬಂಟ್ವಾಳ: ಅಕ್ರಮವಾಗಿ ಮಧ್ಯ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ಅಂಗಡಿಯೊಂದಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ದಾಳಿ ನಡೆಸಿದ ಘಟನೆ ಸಿದ್ದಕಟ್ಟೆ ಎಂಬಲ್ಲಿ ನಡೆದಿದೆ. ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ,ಅಜ್ಜಿ ಬಾಕಿಮಾರು ಸೂರ್ಯಚಂದ್ರಜನರಲ್ ಸ್ಟೋರ್...