Friday, February 7, 2025

ಡಿ. 28ರಂದು ಕಾರ್ಕಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ಧ್ವಜಸ್ತಂಭದ ಕೊಳವೆಕಲ್ಲು, ಧ್ವಜಸ್ತಂಭ ಪೀಠ ಆಗಮನ

ಬಂಟ್ವಾಳ : ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಈ ಬಾರಿಯೂ ಬಿಲ್ಲವ ಸಮಾಜವು ಸೇವಾ ರೂಪದಲ್ಲಿ ಕೊಡಿಮರ(ಧ್ವಜಸ್ತಂಭ) ಸಮರ್ಪಿಸುತ್ತಿದೆ. ಶಿಲ್ಪಿ ಹರೆಕಳ ಬಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಮರದ ಕೆತ್ತನೆ ಕೆಲಸ ಮುಗಿದ ಬಳಿಕ 8,000 ಲೀಟರ್ ಶುದ್ಧ ಎಳ್ಳೆಣ್ಣೆಯಲ್ಲಿ ಅದ್ದಿಟ್ಟ ಕೊಡಿಮರ ಹೊರತೆಗೆಯಲಾಗಿದೆ. ಇನ್ನುಳಿದಂತೆ ದೇವಸ್ಥಾನದಲ್ಲಿ ಕೊಡಿಮರ ಸ್ಥಾಪನೆಗೆ ಮುಂಚೆ ನಡೆಯಬೇಕಿರುವ ಉಳಿದ ಪೂಜಾ ವಿಧಿವಿಧಾನಗಳು ಒಂದರ ಬಳಿಕ ಒಂದರಂತೆ ನಡೆಯುತ್ತಲಿವೆ.

ಕಾರ್ಕಳ ಕೃಷ್ಣ ಆಚಾರ್ಯರ ನೇತೃತ್ವದ ನುರಿತ ಶಿಲ್ಪಿಗಳು ಕೊಡಿಮರಕ್ಕೆ ಅಗತ್ಯವಿರುವ ಧ್ವಜಸ್ತಂಭದ ಆಧಾರ ಶಿಲೆ, ಕೊಳವೆಕಲ್ಲು (ದಂಬೆಕಲ್ಲು) ಧ್ವಜಸ್ತಂಭದ ಪೀಟದ ಕೆತ್ತನೆಯ ಶಿಲಾಕೃತಿ ಕೆಲಸ ಈಗಾಗಲೇ ಪೂರ್ಣಗೊಳಿಸಿದ್ದಾರೆ.

ಕೊಡಿಮರಕ್ಕೆ ಅಂದಾಜು 2,500 ಕಿಲೋ ಕಂಚಿನ ಹೊದಿಕೆಯ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಲಿವೆ.ಕೇರಳದ ಪ್ರಸಿದ್ಧ ಶಿಲ್ಪಿ ವಿ ಪಿ ಪ್ರಕಾಶ್ ನೇತೃತ್ವದ ಕಲಾಕಾರರು ಧ್ವಜಸ್ತಂಭದ ತುತ್ತತುದಿಗೆ ಪಂಚಲೋಹದ ಚಿನ್ನದ ಲೇಪನವಿರುವ ನವಿಲಿನ ಕಲಾಕೃತಿ ರಚಿಸಿದ್ದಾರೆ.

ಐದಡಿ ಎತ್ತರ ಮತ್ತು ಮೂರಡಿ ಅಗಲದ ನವಿಲಿನ ಹುಬ್ಬು ಚಿತ್ರವಿರುವ ಬೆಳ್ಳಿಯ ಗರುಡಧ್ವಜದ ಕೆಲಸಕಾರ್ಯಗಳು ಅರ್ಕುಳ ತುಪ್ಪೆಕಲ್ಲಿನ ಧನಂಜಯ ಆಚಾರ್ಯ ಅವರ ನೇತೃತ್ವದಲ್ಲಿ ನಾಜೂಕಾಗಿ ನಡೆಯುತ್ತಲಿವೆ.

ಡಿ. 28ರಂದು ಕೊಡಿಮರ ಸ್ಥಾಪನೆಗೆ ಬೇಕಾದ ‘ಆಧಾರಶಿಲೆ’ ಕೊಳವೆಕಲ್ಲು ಧ್ವಜಸ್ತಂಭದ ಪೀಠ ಕಾರ್ಕಳದ ಶ್ರೀ ಕೃಷ್ಣ ಆಚಾರ್ಯರ ಕಾರ್ಯಾಗಾರದಿಂದ ಮಧ್ಯಾಹ್ನ 12.10ರ ನಂತರ ಶ್ರೀ ಕ್ಷೇತ್ರ ಪೊಳಲಿಗೆ ಹೊರಡಲಿದೆ.

ಸಧ್ಬಕ್ತರ ಕೂಡುವಿಕೆಯೊಂದಿಗೆ ಕಾರ್ಕಳದಿಂದ ಹೊರಡುವಧ್ವಜಪೀಠದ ಮೆರವಣಿಗೆ ಮಧ್ಯಾಹ್ನ ಒಂದು ಗಂಟೆಗೆ ಮೂಡಬಿದ್ರೆ ತಲುಪಿ ಅಲ್ಲಿ ಗ್ರಾಮದೇವರಿಗೆ ಮಹಮ್ಮಾಯಿ ದೇವಸ್ಥಾನದಲ್ಲಿ ಪ್ರಾರ್ಥಿಸಿ ಹರಕೆ ಸಲ್ಲಿಸಿ ಮುಂದುವರಿಯಲಿದೆ.

ಎಡಪದವು ಶ್ರೀ ರಾಮಭಜನಾ ಮಂದಿರದ ಎದುರುಗಡೆ ತುಸು ನಿಲುಗಡೆಗೊಳಿಸಿ ಭಕ್ತರಿಗೆ ಧ್ವಜಪೀಠ ಶಿಲೆಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.

ಮಧ್ಯಾಹ್ನ 2.30ಕ್ಕೆ ಗಂಜಿಮಠ ಶ್ರೀ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಯಲಿದ್ದು, ಅಲ್ಲಿಂದ ವಾಹನಗಳ ಮೂಲಕ ಧ್ವಜಪೀಠದ ಮೆರವಣಿಗೆ ಮುಂದುವರಿದು.ಅಪರಾಹ್ನ 3.15ಕ್ಕೆ ಕೈಕಂಬ ಗಣೇಶ್ ಕಟ್ಟೆಯಬಳಿ ಭಗವ್ದಭಕ್ತರಿಗೆ ಧ್ವಜಪೀಠದ ದರ್ಶನದ ಬಳಿಕ 4 ಗಂಟೆಗೆ ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸಲಿದೆ.
ಭಕ್ತ ಮಹಜನರು ಅಂದು ಅಪರಾಹ್ನ 2.30ಕ್ಕೆ ಗಂಜಿಮಠ ಶ್ರೀ ಗಣಪತಿ ದೇವಸ್ಥಾನದ ಬಳಿ ಜಮಾಯಿಸಿ, ಅಲ್ಲಿಂದ ತಮ್ಮ ಸ್ವಂತ ವಾಹನಗಳಲ್ಲಿ ಜಾಥಾ ಮೂಲಕ ದೇವಸ್ಥಾನದತ್ತ ಸಾಗಬೇಕಾಗಿ ಭಗವ್ದಭಕ್ತರಲ್ಲಿ ವಿನಂತಿ.

ಕೊಡಿಮರಕ್ಕೆ ಸಂಬಂಧಿಸಿ ಇತರ ಧಾರ್ಮಿಕ ಕಾರ್ಯಕ್ರಮ :

ಡಿ. 28ರಂದು ಕೊಡಿಮರ ಆಧಾರಶಿಲೆ ಕ್ಷೇತ್ರಕ್ಕೆ ಆಗಮನ * ಡಿ. 31ರಂದು ಬೆಳಿಗ್ಗೆ 9.40-10ರವರೆಗೆ ಶಿಲಾನ್ಯಾಸಕ್ಕೆ ದ್ರವ್ಯಾನ್ಯಾಸ-ನಿಧಿಕುಂಭಸ್ತಾಪನೆ * ಜನವರಿ 2ರಂದು ಸಂಜೆ 7ಕ್ಕೆ ಮರಕ್ಕೆ ಕುತ್ತಿಪೂಜೆ * ಜ. 10ರಂದು ಬೆಳಿಗ್ಗೆ 9.50ರಿಂದ 10 ಕಂಚಿನವರಿಂದ ತಾಮ್ರ ಹೊಡೆಯುವಿಕೆ * ಜ. 21ರಂದು 8.30 ಧ್ವಜಸ್ತಂಭ ಸ್ಥಾಪನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

More from the blog

ಅನರ್ಹ ಮತದಾರರ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಗೆ ಪರಿಗಣಿಸಬಾರದು: ಉಚ್ಚ ನ್ಯಾಯಾಲಯದ ತೀರ್ಪು

ಬಂಟ್ವಾಳ: ಮಡಂತ್ಯಾ‌ರ್ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿರುವ ವ್ಯಕ್ತಿಗಳ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಯಲ್ಲಿ ಪರಿಗಣಿಸಬಾರದು ಎಂದು ಕರ್ನಾಟಕ ಉಚ್ಚ ನ್ಯಾಯಲಯವು ಐತಿಹಾಸಿಕ ತೀರ್ಪನ್ನು ಹೊರಡಿಸಿದೆ. ಮಡಂತ್ಯಾ‌ರ್ ಪ್ರಾಥಮಿಕ...

ಬಂಟ್ವಾಳ : ತಾಲೂಕು ಆಸ್ಪತ್ರೆಗೆ ವೈದ್ಯರನ್ನು ನೀಡಿ – ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ

ಬಂಟ್ವಾಳ: ಸುಸಜ್ಜಿತವಾದ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆಯಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಿಯಾದ ವಿಭಾಗದಲ್ಲಿ ವೈದ್ಯರುಗಳಿಲ್ಲದೆ, ತಾಲೂಕಿನ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಸಾಮಾಜಿಕ ಕಾರ್ಯಕರ್ತ ಸಮಾದ್ ಕೈಕಂಬ ಅವರು...

ಕಣಿಯೂರು: ನುಡಿನಮನ, ಯಕ್ಷಗಾನ ತಾಳಮದ್ದಳೆ

ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಉಪನ್ಯಾಸಕ ಪಕಳಕುಂಜ ಶ್ಯಾಮ್ ಭಟ್, ಕೂಡ್ಲು ಗಣಪತಿ ಭಟ್ ಅವರಿಗೆ ನುಡಿ ನಮನ ಹಾಗೂ ಯಕ್ಷಗಾನ ತಾಳಮದ್ದಳೆ...

ಒಡಿಯೂರಿನಲ್ಲಿ 25ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಒಡಿಯೂರು ರಥೋತ್ಸವ ತುಳುನಾಡ ಜಾತ್ರೆಯ ಅಂಗವಾಗಿ 25 ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ...