ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ವಿಶಾಲ ತಾತ್ಕಾಲಿಕ ಅಡುಗೆ ಛತ್ರಕ್ಕೆ ಅಳವಡಿಸಲಾಗಿದ್ದ ಇಂಟರ್‌ಲಾಕ್, ಕಲ್ಲು-ಮಣ್ಣು ಹಾಗೂ ಇತರ ಸೊತ್ತನ್ನು ತೆರವುಗೊಳಿಸಲಾರಂಭಿಸಿದರು.

ಡಿವೈನ್ ಪಾರ್ಕ್ ಸಾಲಿಗ್ರಾಮ ಇದರ ಅಂಗಸಂಸ್ಥೆಯಾದ ಬಂಟ್ವಾಳ ನರಿಕೊಂಬಿನ ವಿವೇಕ ಜಾಗ್ರತ ಬಳಗದ ಸುಮಾರು 58 ಸದಸ್ಯರ ತಂಡ ಭಾನುವಾರ ಬೆಳಿಗ್ಗೆ ಕೆಲಸ ಆರಂಭಿಸಿರುವ ಕಾರ್ಯಕರ್ತರು ಶ್ರೀ ರಾಮ ಸ್ತೋತ್ರ ಪಠಿಸುತ್ತ ಶ್ರಮದಾನ ನಡೆಸಿದರು.