ಬಂಟ್ವಾಳ: ಪೊಳಲಿಯ ಸರ್ವಮಂಗಳ ಸ್ವರೂಪಿಣಿ ರಾಜರಾಜೇಶ್ವರಿ ಅಮ್ಮನಿಗೆ ನಡೆಯಿತು ಬ್ರಹ್ಮಕಲಶೋತ್ಸವ. ಮುಂಜಾನೆ 4 ರಿಂದ ವಿವಿಧ ವೈದಿಕ ಕಾರ್ಯಕ್ರಮ ಗಳು ನಡೆದ ಬಳಿಕ ಬೆಳಿಗ್ಗೆ 7.40 ರಿಂದ ದೇವಸ್ಥಾನದಲ್ಲಿ ಐತಿಹಾಸಿಕ ಬ್ರಹ್ಮಕಲಶಾಭಿಷೇಕ ನಡೆಯಿತು.
ಮುಂಜಾನೆಯಿಂದಲೇ ಲಕ್ಷ ಲಕ್ಷ ಭಕ್ತರು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡರು.
ಕ್ಷೇತ್ರದ ಪ್ರಧಾನತಂತ್ರಿ ವೇ.ಮೂ. ಸುಬ್ರಹ್ಮಣ್ಯ ತಂತ್ರಿ ಇವರ ನೇತ್ರತ್ವದಲ್ಲಿ ಋತ್ವಿಜ್ಞರೊನ್ನೊಳಗೊಂಡ 60 ಮಂದಿಯ ವೈದಿಕರ ತಂಡ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಕೋಟ್ಯಾಂತರ ಭಕ್ತರ ಆರಾದ್ಯ ಶಕ್ತಿಯಾಗಿ ಕರಾವಳಿಯ ಪ್ರಮುಖ ಶಕ್ತಿಗಳ ದೇವಾಲಯ ಗಳಲ್ಲಿ ಪೊಳಲಿ ರಾಜರಾಜೇಶ್ವರಿ ಅಮ್ಮನವರ ದೇವಾಲಯವೂ ಒಂದಾಗಿದೆ.
ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವ ಇಂದು ಸಂಪನ್ನಗೊಳ್ಳಲಿದೆ. ಇಡೀ ಜಿಲ್ಲೆಯಲ್ಲಿ ಹೊಸಸಂಚಲನ ಮೂಡಿಸಿ ಭಕ್ತರ ಭಕ್ತಿಗೆ ಶಕ್ತಿ ನೀಡಿದ ಪೊಳಲಿ ಅಮ್ಮನಿಗೆ ವೈಭವದ ಕಲಾಶಾಭಿಷೇಕ ನಡೆಯಿತು.
ಮಾ4 ರಿಂದ ಮಾ13 ರ ಇಂದಿನ ವರೆಗೂ ಅಚ್ಚುಕಟ್ಟಾದ ಎಲ್ಲಾ ವ್ಯವಸ್ಥೆ ಗಳು ಜಿಲ್ಲೆಯ ಜನರನ್ನು ಬೆರಗುಗೊಳಿಸಿದೆ.
ಪಲಿನಾಪುರದ ದೇವಿಯ ಪ್ರಬಲ ಶಕ್ತಿಯ ಜೊತೆಗೆ ಧಾರ್ಮಿಕ ದತ್ತಿ ಇಲಾಖೆ, ಆಡಳಿತ ಮಂಡಳಿ, ತಂತ್ರಿಗಳು ಹಾಗೂ ಊರ ಪರ ಊರ ಭಕ್ತರ ಒಂದೇ ಮನಸ್ಸಿನ ಸೇವೆ ಪೊಳಲಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.