ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಬಿಸಿರೋಡಿನ ಲ್ಲಿ ಹಾಕಲಾಗಿದ್ದ ಬ್ಯಾನರ್ ಗಳನ್ನು ಪುರಸಭಾ ಅಧಿಕಾರಿ ಗಳು ಇಂದು ಮುಂಜಾನೆ ತೆರವುಗೊಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಯ ನೆಪವೊಡ್ಡಿ ಪೊಳಲಿ ದೇವಾಲಯದ ಬ್ರಹ್ಮಕಲಶೋತ್ಸವ ದ ಅಂಗವಾಗಿ ಹಾಕಲಾಗಿದ್ದ ಬ್ಯಾನರ್ ಗಳ ತೆರವು ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.
ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಬ್ಯಾನರ್ ಗಳನ್ನು ತೆರವುಗೊಳಿಸುವ ವೇಳೆ ಭಕ್ತರು ಹಾಗೂ ಪುರಸಭಾ ಅಧಿಕಾರಿಗಳ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.

ಯಾವುದೇ ರಾಜಕೀಯ ಪ್ರಚಾರದ ಉದ್ದೇಶದಿಂದ ನಾವು ಬ್ಯಾನರ್ ಅಳವಡಿಸಿಲ್ಲ, ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ಭಕ್ತರ ಭಕ್ತಿಯ ನೆಲೆಯಾದ ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಇಲ್ಲಿ ಬ್ಯಾನರ್ ಗಳನ್ನು ಹಾಕಲಾಗಿದೆ ಇದನ್ನು ತೆರವುಮಾಡಬಾರದು ಎಂದು ಭಕ್ತರು ಪುರಸಭಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ, ಆ ಸಂದರ್ಭದಲ್ಲಿ ಕೆಲಹೊತ್ತು ಪುರಸಭಾ ಸಿಬ್ಬಂದಿ ಗಳು ಹಾಗೂ ಭಕ್ತರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ನಡೆದಾಗ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸ್ಥಳಕ್ಕೆ ಬೇಟಿ ಕಾನೂನು ಸ್ಯುವ್ಯಸ್ಥೆಗೆ ತೊಂದರೆ ಆಗದಂತೆ ಎಚ್ಚರ ವಹಿಸಿದ್ದರು.
ಪೊಳಲಿ ದೇವಾಲಯದ ಬ್ರಹ್ಮಕಲಶೋತ್ಸವ ಅಂಗವಾಗಿ ಬಿಸಿರೋಡಿನ ಲ್ಲಿ ಹಾಕಲಾಗಿದ್ದ ಬ್ಯಾನರ್ ಗಳು ಬಿಸಿರೋಡ್ ಪರಿಸರದಲ್ಲಿ ಹಬ್ಬ ದ ವಾತಾವರಣ ಉಂಟಾಗಿತ್ತು. ಆದರೆ ಚುನವಣಾ ನೀತಿ ಸಂಹಿತೆ ಯ ಬಿಸಿ ಬಿಸಿರೋಡಿನಲ್ಲಿದ್ದ ಸಂಭ್ರಮ ದ ವಾತಾವರಣ ಕಳೆಗುಂದಿದೆ.
ಜಿಲ್ಲಾಧಿಕಾರಿ ಗಳಿಗೆ ಭಕ್ತರು ಪೋನ್ ಮೂಲಕ ಸಂಪರ್ಕ ಮಾಡಲಾಗಿ ತಾತ್ಕಾಲಿಕ ವಾಗಿ ತೆರವು ಕಾರ್ಯಕ್ಕೆ ಬ್ರೇಕ್ ಬಿದ್ದಿದೆ.
ಕೈಕಂಬ ಪರಿಸರದ ಕೆಲವು ಬ್ಯಾನರ್ ಗಳಿಗೆ ತಾತ್ಕಾಲಿಕವಾಗಿ ಉಳಿದಿದೆ.
ಪ್ರಮುಖರಾದ ಮಚ್ಚೇಂದ್ರ ಸಾಲಿಯಾನ್, ಪ್ರಣಾಮ್ ಬಿಸಿರೋಡ್, ನಾಗೇಶ್, ಪ್ರತೀಶ್, ಮಹೇಶ್ ಶೆಟ್ಟಿ ಹಾಗೂ ಪುರಸಭಾ ಸಿಬ್ಬಂದಿ ಗಳಾದ ಇಕ್ಬಾಲ್ ಮತ್ತಿತರ ಹಾಜರಿದ್ದರು.