ಬಂಟ್ವಾಳ: ದ.ಕ.ಜಿಲ್ಲೆಯ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ದ ಪುನರ್ ಪ್ರತಿಷ್ಠೆ , ಅಷ್ಟಬಂಧ , ನೂತನ ಧ್ವಜಸ್ತಂಭ ಪ್ರತಿಷ್ಠಾ ಮತ್ತು ಬ್ರಹ್ಮ ಕಲಶಾಭಿಷೇಕ ಮಾ.4 ಸೋಮವಾರದಿಂದ .13 ಬುಧವಾರ ದವರೆಗೆ ಜರಗಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ , ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಪೊಳಲಿ ದೇವಸ್ಥಾನ ದ ಚೆಂಡಿನ ಗದ್ದೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಶ್ರೀ ದುರ್ಗಾಪರಮೇಶ್ವರಿ, ಶ್ರೀ ರಾಜರಾಜೇಶ್ವರಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಭದ್ರಕಾಳಿ ದೇವರುಗಳ ಮತ್ತು ಪರಿವಾರ ಸಾನಿಧ್ಯಗಳ ಗರ್ಭಗ್ರಹವು ಪುನರ್ ನಿರ್ಮಾಣ ಗೊಂಡಿದೆ.
ಅಂದಾಜು 20 ಕೋಟಿ ವೆಚ್ಚದಲ್ಲಿ ದೇವಸ್ಥಾನ ನವೀಕ್ರತಗೊಂಡಿದ್ದು ಊರ ಪರವೂರ ಭಕ್ತರ ಸಹಾಯ ಹಾಗೂ ಕರಸೇವಕರ ನಿರಂತರ ಶ್ರಮದಾನದಿಂದ ದೇವಸ್ಥಾನ ವು ಪುನರ್ ನಿರ್ಮಾಣ ಗೊಂಡಿದೆ.
ಶಿಲಾಮಯ , ಕಾಷ್ಠಶಿಲ್ಪ, ದ್ವಾರಗಳಿಗೆ ರಜತಕವಚ, ಮೇಲ್ಭಾವಣಿಗೆ ತಾಮ್ರದ ಹೊದಿಕೆಯೊಂದಿಗೆ ದೇವಸ್ಥಾನ ನವೀಕ್ರತಗೊಂಡಿದೆ. ಇದೇ ಸಂದರ್ಭದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠೆ ನಡೆಯಲಿದೆ.
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪ್ರತಿ ದಿನ ದೇವಸ್ಥಾನ ದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ಗಳು , ಧಾರ್ಮಿಕ ಸಭಾ ಕಾರ್ಯಕ್ರಮ ಗಳು, ಬೆಳಿಗ್ಗಿನಿಂದ ರಾತ್ರಿ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಭಕ್ತರಿಗೆ ಉಪಾಹಾರ ಹಾಗೂ ಅನ್ನದಾಸೋಹವು ನಿರಂತರವಾಗಿ ನಡೆಯುತ್ತದೆ ಎಂದರು.
ಬ್ರಹ್ಮ ಕಲಶೋತ್ಸವ ಯಶಸ್ವಿಯಾಗಿ ನಡೆಯಲು ವಿವಿಧ ಉಪಸಮಿತಿಗಳ ರಚನೆ ಮಾಡಲಾಗಿದೆ.
ಮಾ.4 ರಂದು ವಿವಿಧ ಭಾಗಗಳಿಂದ ದೇವಸ್ಥಾನ ಕ್ಕೆ ಹೊರೆಕಾಣಿಕೆ ಮೆರವಣಿಗೆಯ ಮೂಲಕ ಸಮರ್ಪಣೆಯಾಗಲಿದೆ.
ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇರೆ ಬೇರೆ ಯವಕರ ತಂಡಗಳನ್ನು, ಮಹಿಳೆಯರ ತಂಡಗಳನ್ನು ರಚನೆ ಮಾಡಲಾಗಿದೆ .
ದೇವಲಾಯದ ಮುಂಭಾಗದ ಮೂಲಕ ದೇವಲಯ ಕ್ಕೆ ಬರಲು ಅವಕಾಶ ಮಾಡಲಾಗಿದೆ, ಭಕ್ತರು ಗಮನಿಸುವಂತೆಯೂ ತಿಳಿಸಿದರು.
20 ಎಕರೆ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ .
ಪೂರ್ಣ ದೇವಾಲಯ ವನ್ನು ಸಿ.ಸಿ.ಕ್ಯಾಮರಾದಿಂದ ಕವರ್ ಮಾಡಲಾಗಿದೆ.
ಸುಮಾರು ಹತ್ತುಲಕ್ಷ ಭಕ್ತಾದಿಗಳು ಬರುವ ನಿರೀಕ್ಷೆ ಇದೆ.
ಕಾರ್ಯಕ್ರಮ ಕ್ಕೆ ಬರುವ ಅತಿಥಿಗಳಿಗೆ ದೇವಸ್ಥಾನ ದ ಹಿಂದಿನ ತಾಮ್ರವನ್ನು ಉಪಯೋಗಿಸಿ ಸ್ಮರಣಿಕೆ ತಯಾರಿ ಮಾಡಲಾಗಿದೆ ಎಂದು ಅವರು ಹೇಳಿದರು.
ಬ್ರಹ್ಮ ಕಲಶೋತ್ಸವ ಸಮಿತಿ
ಪ್ರಧಾನ ಕಾರ್ಯದರ್ಶಿ ತಾರಾನಾಥ ಅವರು ಮಾತನಾಡಿ,
ಪ್ರತಿ ಹನ್ನೆರಡು ವರ್ಷ ಗಳಿಗೊಮ್ಮೆ ಬ್ರಹ್ಮಕಲಶೋತ್ಸವ ಅಗುವುದು ರೂಡಿ, ಕಳೆದ 200 ವರ್ಷಗಳ ಹಿಂದೆ ಈ ರೀತಿಯಲ್ಲಿ ವೈಭವದ ಬ್ರಹ್ಮಕಲಶೋತ್ಸವ ನಡೆದಿರಬಹುದು ಎಂದು ಅವರು ಹೇಳಿದರು.
ಗೌರವಾಧ್ಯಕ್ಷ ನಾಗರಾಜ್ ಶೆಟ್ಟಿ ಮಾತನಾಡಿ , ಪ್ರತಿಯೊಂದು ಕಡೆಗಳಿಂದಲೂ ದೇವಾಲಯಕ್ಕೆ ಹೊರೆಕಾಣಿಕೆ ಬರಲಿದೆ.
ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ಗಳು ವ್ಯವಸ್ಥಿತವಾಗಿ ಸಮಯಕ್ಕೆ ಸರಿಯಾಗಿ ನಡೆಯಲಿದೆ ಭಕ್ತರು ಸಹಕಾರ ನೀಡಬೇಕು ಎಂದರು.
ದೇವಾಲಯಕ್ಕೆ ಬರುವ
ಎಲ್ಲಾ ಭಕ್ತರು ಚಪ್ಪಲಿ ಗಳನ್ನು ವಾಹನದಲ್ಲಿಯೇ ಇಟ್ಟು ಬರುವಂತೆ ಮನವಿ ಮಾಡಿದ್ದಾರೆ. ದೇವಾಲಯದ ಸುಮಾರು ಸುತ್ತಲೂ ಕಾರ್ಪೆಟ್ ಹಾಸಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಏರ್ಯ ಲಕ್ಮೀನಾರಾಯಣ ಆಳ್ವ, ಆಡಳಿತ ಮೋಕ್ತೇಸರ ಡಾ! ಮಂಜಯ್ಯ ಶೆಟ್ಟಿ, ಪ್ರಧಾನ ಅರ್ಚಕ ಮಾಧವ ಭಟ್, ಅನುವಂಶಿಕ ಮೋಕ್ತೇಸರ ಚೇರ ಸೂರ್ಯನಾರಾಯಣ ರಾ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪ್ರಚಾರ ಸಮಿತಿಅಧ್ಯಕ್ಷೆ ಡಾ! ಆಶಾಜ್ಯೋತಿ ರೈ, ದೇವಸ್ಥಾನ ದ ತಂತ್ರಿ ಸುಬ್ರಹ್ಮಣ್ಯ ತಂತ್ರಿ, ಉಪಸ್ಥಿತರಿದ್ದರು.
