Monday, January 26, 2026

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ತೆನೆ ಹಬ್ಬ ಆಚರಣೆ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಸೆ.08ರಂದು ಗುರುವಾರ ತೆನೆ ಹಬ್ಬ ಆಚರಣೆ ನಡೆಯಿತು. ಪೊಳಲಿ ದೇವಳದ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ತೆನೆಗಳನ್ನು ಗುತ್ತಿನವರಿಗೆ ಆಡಳಿತ ಮಂಡಳಿಯವರಿಗೆ ಸಾವಿರ ಸೀಮೇಯ ಭಕ್ತಾಧಿಗಳಿಗೆ ಅರ್ಚಕರಿಗೆ, ತೆನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ ತಂತ್ರಿ ಪೊಳಲಿ, ಕ್ಷೇತ್ರದ ಪ್ರಧಾನ ಅರ್ಚಕರಾದ ಮಾಧವ ಭಟ್, ಕೆ.ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರಭಟ್, ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ,ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಅನುವಂಶಿಕ ಮೊಕ್ತೇಸರ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಉದಯ ಆಳ್ವ ಉಳಿಪಾಡಿಗುತ್ತು, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆ ಗುತ್ತು, ಕ್ರಷ್ಣಕುಮಾರ್ ಪೂಂಜ, ಸಂಪತ್ ಕುಮಾರ್ ಶೆಟ್ಟಿ, ದೇವು ದಾಸ್ ಹೆಗ್ಡೆ, ವಿದ್ಯಾಚರಣ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಸಾವಿರ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...