Wednesday, February 4, 2026

ಪೊಳಲಿಯಲ್ಲಿ ವಿಶೇಷ ಪೂಜೆ, ಯಾಗ, ಹವನಾದಿಗಳು

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. 13ರಿಂದ ಕಲಶಾಭಿಷೇಕ ಪ್ರಯುಕ್ತ ವಿಶೇಷ ಪೂಜೆ, ಯಾಗ, ಹವನಾದಿಗಳು ನಡೆಯುತ್ತಿದ್ದು, ಫೆ. 20ರಂದು ಕಲಶಾಭಿಷೇಕ ಹಾಗೂ ಫೆ. 21ರಂದು ಪೂಜಾ ವಿಧಿ-ವಿಧಾನ ಸಂಪನ್ನಗೊಳ್ಳಲಿದೆ. ಅಲ್ಲಿಯವರೆಗೆ ಇಲ್ಲಿ ಭಕ್ತಾದಿಗಳ ಸೇವೆ, ಪೂಜೆಗಳು ನಡೆಯುವುದಿಲ್ಲ.


ದೇವಳದಲ್ಲಿ ಈಗ ನಿರಂತರ ಶುದ್ಧೀಕರಣ ವಿಶೇಷ ಪೂಜೆಗಳು ನಡೆಯುತ್ತಿವೆ. ಕಳೆದ ಎರಡು ದಿನಗಳಿಂದ ದೇವಳಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಇಮ್ಮಡಿಗೊಳ್ಳುತ್ತಿದೆ. ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಬೃಹತ್ ಚಪ್ಪರ ಹಾಕಲಾಗಿದ್ದು, ಏಕಕಾಲದಲ್ಲಿ ನೂರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ. ಪಕ್ಕದಲ್ಲೇ ಅನ್ನಛತ್ರ, ಅಲ್ಲಿ ಗರಿಷ್ಠ ಬಾಣಸಿಗರು ಅಡುಗೆಯಲ್ಲಿ ನಿರತರಾಗಿದ್ದಾರೆ.
ಒಂದೆಡೆ ಕಾರ್ಯಕರ್ತರು ತರಕಾರಿ ಹೆಚ್ಚುತ್ತಿದ್ದರೆ, ಮತ್ತೆ ಕೆಲವರು ತರಕಾರಿ ಹಾಗೂ ಇತರ ಖಾದ್ಯ ಸೊತ್ತು ವಿಂಗಡಿಸುತ್ತಿದ್ದಾರೆ. ಉಗ್ರಾಣದಲ್ಲಿ ತರಕಾರಿ, ಎಣ್ಣೆ, ಅಕ್ಕಿ, ಬೆಲ್ಲ, ನೀರು, ಎಲೆ, ಸೀಯಾಳ ಇನ್ನಿತ ಸೊತ್ತುಗಳು ರಾಶಿ ಬಿದ್ದಿವೆ. ಅನ್ನಛತ್ರಕ್ಕೆ ಅಗತ್ಯವಿರುವ ತೆಂಗಿನ ಸೋಗೆಯನ್ನು ಹೆಂಗಳೆಯರು ಅಂದವಾಗಿ ಹೆಣೆಯುತ್ತಿದ್ದಾರೆ. ಲಕ್ಷಾಂತರ ಮಂದಿ ಸೇರಿದ್ದ ಪೊಳಲಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಳದ ಸ್ವಚ್ಛತೆಗೆ ಕಾರಣೀಭೂತರಾಗಿದ್ದ ಸ್ವಯಂ-ಸೇವಕರು ಈ ಬಾರಿಯೂ ಅನ್ನಛತ್ರ, ದೇವಳದ ಸುತ್ತಮುತ್ತ ಸ್ವಚ್ಚತೆ ಒತ್ತು ನೀಡಿದ್ದಾರೆ.
ಫೆ. 20ರಂದು ನಡೆಯಲಿರುವ ಕಲಶಾಭಿಷೇಕಕ್ಕೆ ದೇವಳವು ಮದುವಣಗಿತ್ತಿಯಂತೆ ಸಂಪೂರ್ಣ ಹೂವು ಹಾಗೂ ವಿದ್ಯುತ್ ದೀಪಗಳಿಂದ ಸರ್ವಾಲಂಕೃತವಾಗಿದೆ. ಎಲ್ಲೆಡೆ ನೋಡಿದರೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

More from the blog

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಕುದ್ರೆಬೆಟ್ಟು : ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ – ನಾಲ್ವರಿಗೆ ಗಾಯ

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಮೇಲತ್ಸುವೆಯ ಕೊನೆಯ ಭಾಗದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಅಳಕೆಮಜಿಲು ನಿವಾಸಿ ಅವ್ವಮ್ಮ ಹಾಗೂ ಸುಹೈಲ್ ರಿಕ್ಷಾ...

ಕಟೀಲು 7 ಮೇಳಗಳ ಫೆ.04ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಫೆ.04ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಫೆ.04ರ ಸೇವೆಯಾಟಗಳ ವಿವರ : ದೀಪಕ್ ಶೆಟ್ಟಿ, ಬೈಲುತೇಂಜ ಹೌಸ್, ಕಂದಾವರ,...

ಗೋಳ್ತಮಜಲು : ಮಲ ತ್ಯಾಜ್ಯ ನಿರ್ವಹಣಾ ಘಟಕದ ನಿರ್ವಹಣೆಯಲ್ಲಿ ಎಡವಿತಾ ಸ್ಥಳೀಯಾಡಳಿತ?

ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಚಿಮಿಣಿಗುರಿಯಲ್ಲಿ ನಿರ್ಮಾಣಗೊಂಡಿರುವ ಬಹುಗ್ರಾಮ ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸಾಮರ್ಥ್ಯದಷ್ಟು ತ್ಯಾಜ್ಯದ ಲೋಡ್ ಬಾರದೇ ಇದ್ದು, ಘಟಕದ ವ್ಯಾಪ್ತಿಗೆ ಬರುವ ಸ್ಥಳೀಯಾಡಳಿತಗಳು...