ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಗೋಪುರದಲ್ಲಿ ಡಿ.28 ರಂದು ಸೋಮವಾರ ಭಜನಾ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ರಾಮ್ ಭಟ್ , ಪರಮೇಶ್ವರ ಭಟ್,ಕೆ.ಪದ್ಮನಾಭ ಭಟ್, ಗಿರಿಪ್ರಕಾಶ್ ತಂತ್ರಿ ಚಾಲನೆ ನೀಡಿದರು. ದೇವಳದ ಆಢಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ,ಯು.ತಾರನಾಥ ಆಳ್ವ,ಚೇರ ಸೂರ್ಯನಾರಾಯಣ ರಾವ್, ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ದೇವರ ಸನ್ನಿಧಿಯಲ್ಲಿ ಸಣ್ಣಪುಟ್ಟ ಕೆಲಸಗಳು ನಡೆಯುವ ಈ ಸಂದರ್ಭದಲ್ಲಿ ರಾಜರಾಜೇಶ್ವರೀ ಭಜನಾ ಮಡಳಿಯವರು ಡಿ. 28ರಿಂದ ಫೆ. 17ರವರೆಗೆ ಬೆಳಗ್ಗಿನಿಂದ ಸಂಜೆ 6 ಗಂಟೆಯವರೆಗೆ ಭಜನಾ ಸಂಖಿರ್ತನೆಯನ್ನು ಹಮ್ಮಿಕೊಂಡಿದ್ದು ನಾನಾ ಭಾಗಗಳಿಂದ ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಸಂಖೀರ್ತನೆ ನಡೆಸಿಕೊಡಲಿದ್ದಾರೆ ಎಂದು ರಾಜರಾಜೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷ ವೆಂಕಟೇಶ್ ನಾವಡ ತಿಳಿಸಿದ್ದಾರೆ.

