ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ನೀಡಿದ ಕೊಡಿಮರಕ್ಕೆ (ಧ್ವಜಸ್ತಂಭ) ಗುರುವಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಂಚಿನ ಕಲಾಕಾರ ಶ್ರೀಧರ ಆಚಾರ್ಯರ ಮುಂದಾಳತ್ವದಲ್ಲಿ ಕಂಚಿನ ಹೊದಿಕೆ ಅಳವಡಿಸುವ ಕೆಲಸ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್, ಶೇಖರ ಬಳ್ಳಿ, ಯಶವಂತ ಪೊಳಲಿ, ಗೋಪಾಲಕೃಷ್ಣ ಕೈಕಂಬ ,ಚಂದಪ್ಪ ಅಂಚನ್, ಪುರುಷ ಸಾಲ್ಯಾನ್, ಉಮೇಶ ಬಾರಿಂಜ, ರಾಮಪ್ಪಪೂಜಾರಿ, ಸದಾಶಿವಕರ್ಕೇರಾ ಕಾಜಿಲ, ಮೋಹನ್‌ಸಾಲಿಯಾನ್, ಕರುಣಾಕರ,ನವೀನ್ ಮೊದಲಾದವರಿದ್ದರು.
