ಬಂಟ್ವಾಳ, : ೧೭ವರ್ಷದ ಮಗಳ ಮೇಲೆ ತಂದೆಯಿಂದಲೇ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಕುಕ್ಕಾಜೆ ನಿವಾಸಿ ದಾವೂದ್ ಅತ್ಯಾಚಾರ ಎಸಗಿದ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ:
ತಂದೆ ದಾವೂದ್ ತನ್ನ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿದ್ದಾರೆ. ಎರಡು ಬಾರಿ ಮನೆಯಲ್ಲಿ ಒಂದು ಬಾರಿ ಮೆಲ್ಕಾರ್ ನ ಲಾಡ್ಜ್ ವೊಂದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.
ಆರೋಪಿ ದಾವೂದ್ ಈ ಮೊದಲು ಪಾಣೆಮಂಗಳೂರು ನಿವಾಸಿಯಾಗಿದ್ದು, ಕೆಲ ವರ್ಷಗಳಿಂದ ಮಂಚಿಗೆ ಬಂದು ವಾಸವಾಗಿದ್ದಾರೆ. ನಾಲ್ಕು ಮದುವೆಯಾಗಿರುವ ದಾವೂದ್ ಗೆ ೧೫ ಮಕ್ಕಳಿದ್ದು, ತನ್ನ ೨ನೆ ಪತ್ನಿಯ ಮಗಳ ಮೇಲೆ ಅತ್ಯಾಚಾರ ಎಸಗಿರುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ದಾವೂದ್ ನ ಮೊದಲನೆ ಪತ್ನಿ ಬಿಟ್ಟು ಹೋಗಿದ್ದು, ಉಳಿದವರು ಒಂದೊಂದು ಕಡೆ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.


ಬಾವನಿಂದಲೂ ಅತ್ಯಾಚಾರ:
ವಾರಗಳ ಹಿಂದೆ ಸಂತ್ರಸ್ತೆಯ ಮೇಲೆ ಅಕ್ಕನ ಗಂಡ ( ಬಾವ) ಕೂಡ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚೈಲ್ಡ್ ಹೆಲ್ಪ್ ಲೈನ್ ಅವರು ಸಂತ್ರಸ್ತೆಯನ್ನು ವಿಚಾರಣೆ ನಡೆಸಿದಾಗ ತಂದೆಯು ಕೂಡಾ ತನ್ನ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿದ್ದಾರೆನ್ನುವ ಆಘಾತಕಾರಿ ವಿಷಯ ಬೆಳಕಿದೆ ಬಂದಿದೆ.
ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.