Thursday, June 26, 2025

ಚಂದ್ರನಿಗೆ ಅಪೀಲು

ಬಾರೊ
ಹೋಳಿಯ ರಾಯ
ಕಾದೈತಿ ಮೈಮನವು
ಬಿಡದೆ ಸುಡತೈತಿ ನೆಲಮುಗಿಲು
ಬೇಗ ತಣ್ಣನೆಯ ಹೂ ಬೆಂಕಿ ಇಡೋ…!

ಕಡಲಾಗ ಕುಣಿತೀದಿ
ಮುಗಲಾಗ ಮೆರಿತೀದಿ
ಕಂಡ ಕಂಡವರ ಕಣ್ಣಾಗ ಹೊಳಿತೀದಿ
ನಿನ ಚೆಲುವು ನಮಗೂ ಕೊಡೋ..!

ನಿನ ಅಂದ ನಿನ ಚೆಂದ
ನಿನ ಹೊಳಪು ನಿನ ನುಣುಪು
ನಾರ್ಯಾರಿಗೆ ಕೊಟ್ಟು ನಂಮನ್ನ
ಕೈಬಿಟ್ಟಿ! ನಿಂದೇನು ಹೇಳ್ತಿ ಬಿಡೋ..?

ನಿನ ಬುದ್ಧಿ ನೋಡೀನೆ
ದಕ್ಷ ಹಾಕಿದ ಶಾಪ
ಬಿಡದಂಗ ಉಳಿಯೀತು ಜಗದಾಗ
ಇನ್ನಾದರೂ ಚೆಲುವು ನಮಗೇ ಕೊಡೋ…

ನೀ.ಶ್ರೀಶೈಲ ಹುಲ್ಲೂರು

More from the blog

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಪ್ರಭಾಕರ ಪ್ರಭು ಆಗ್ರಹ..

ಬಂಟ್ವಾಳ : ರಾಜ್ಯದ ವಸತಿ ಇಲಾಖೆಯ ಅಧಿನದಲ್ಲಿರುವ ರಾಜೀವ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರಾದ ಬಿ. ಆರ್. ಪಾಟೀಲ್ ಯವರು ವಸತಿ ಸಚಿವರಾದ ಜಮೀರ್...

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...