Thursday, January 29, 2026

ನನ್ನಯ ಅಜ್ಜ

ಬಾರೋ ಬಾರೋ ನನ್ನಜ್ಜ

ತಿಂಡಿಯ ಕೊಡುವೆನು ತಿನ್ನಜ್ಜ!

ನಾನೂ ನೀನೂ ಸೇರೋಣ

ಕೂಡಿಯೆ ಆಟವ ಆಡೋಣ!

ಅಪ್ಪನು ಕಂಡರೆ ಹೇಳುವೆನು

ಹೋದ ಕೂಡಲೆ ಕರೆಯುವೆನು!

ಅಮ್ಮನು ಬೈದರೆ ತಿಳಿಸುವೆನು

ಉಂಡಿಯ ತಂದು ತಿನಿಸುವೆನು!

ಬುಗುರಿಯ ತರುವೆನು ವೇಗದಲಿ

ಜಾಳಿಗೆ ಸುತ್ತುವೆ ಮೋಜಿನಲಿ!

ಎಸೆದಾ ಜೋರಿಗೆ ತಿರುಗುವುದು

ಕಾಮನಬಿಲ್ಲನು ತೋರುವುದು!

ಅಮ್ಮನು ಕೊಟ್ಟರೆ ಒಬ್ಬಟ್ಟು

ನಿನಗೂ ತಿನಿಸುವೆ ತೆಗೆದಿಟ್ಟು!

ಏನಿದು ಮನೆಯಲಿ ಕಣ್ಕಟ್ಟು?

ನಿನಗೆ ತಟ್ಟೆಯ ಹೊರಗಿಟ್ಟು!

ಬೇಸರದಿಂದಲಿ ಕೊರಗದಿರು

ಒಳಗೊಳಗೇ ನೀ ನೋಯದಿರು!

ನನ್ನೊಂದಿಗೆ ನೀ ಹಾಡುತಿರು

ಅವರಿಗು ಕಾದಿದೆ ನೋಡುತಿರು!

ನೀ. ಶ್ರೀಶೈಲ ಹುಲ್ಲೂರು

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...