Saturday, January 31, 2026

ಅನನಾಸು ಬೆಳೆಗೂ ತಟ್ಟಿತು ಕೊರೊನಾ ಲಾಕ್ ಡೌನ್ ಎಫೆಕ್ಟ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹಲವೆಡೆ ಸುಮಾರು ತೊಂಬತ್ತು ಎಕ್ರೆ ಪ್ರದೇಶದಲ್ಲಿ ಅನನಾಸು ಬೆಳೆ ಬೆಳೆಯುತ್ತಿದ್ದಾರೆ. ಕೇರಳ ಎರ್ನಾಕುಲಂ ಮೂಲದ ಶೈಜು ಎನ್.ಪಿ. ಇವರು ತೋಟತ್ತಡಿ, ಲಾಯಿಲ, ನೆರಿಯಾ, ನೆಕ್ಕರೆ, ಗುರಿಪಳ್ಳ ಸುತ್ತಮುತ್ತ ಸುಮಾರು‌ 90 ಎಕ್ರೆಗಿಂತ ಹೆಚ್ಚು ಸ್ಥಳದಲ್ಲಿ ಈ ವರ್ಷ ಬಂಪರ್ ಅನನಾಸು ಬೆಳೆದಿದ್ದಾರೆ. ಆದರೆ ಕೋವಿದ್ -19 ಪರಿಣಾಮ ಲಾಕ್ ಡೌನ್ ನಿಂದ ಮಾರುಕಟ್ಟೆ ಬಂದ್ ಆದ ಕಾರಣ ಬೇಡಿಕೆ ಇಲ್ಲದೆ ಮಾರಾಟ ಮಾಡಲಾಗದೇ ಸಂಕಷ್ಟದಲ್ಲಿದ್ದಾರೆ.

ಜಿಲ್ಲೆಯ ವಿವಿದೆಡೆಗಳಲ್ಲಿ ಕಳೆದ 9 ವರ್ಷಗಳಿಂದ ಅನನಾಸು ಬೆಳೆಯುತ್ತಿದ್ದು, ಪ್ರಸಕ್ತ ಮೂರು ವರ್ಷಗಳಿಂದ ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಮಾಡಿ ಕಠಿಣ ಜಾಗದಲ್ಲಿ 300 ಟನ್ ಅನನಾಸು ಉತ್ತಮ ಬೆಳೆ ಬೆಳೆದು ಕಟಾವಿಗೆ ಸಿದ್ಧವಾಗಿಸಿದ್ದಾರೆ.
ಮಾರ್ಚ್ ನಿಂದ ಜೂನ್ ವರೆಗೆ ಬೇಡಿಕೆ ಇರುವ ಸಮಯದಲ್ಲೇ ಕೊರೊನಾ ಮಹಾಮಾರಿಯ ಲಾಕ್‌ಡೌನ್‌ನಿಂದ ಖರೀದಿಗೆ ಯಾರೊಬ್ಬರೂ ಮುಂದಾಗದೆ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಸುಮಾರು 1.50 ಕೋಟಿ ನಷ್ಟದ ಹಾದಿ ಹಿಡಿದಿದ್ದಾರೆ.

ಅನನಾಸುಗಳಲ್ಲಿ ಮೂರು ವಿಧವಿದ್ದು ಮೋರಿಸ್, ರಾಜ, ರಾಣಿ ತಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಇದರಲ್ಲಿ ಶೈಜು ಅವರು ಬೆಳೆಯುವ ಮೋರಿಸ್ ತಳಿಗೆ ದೆಹಲಿ, ಬ್ವಾಂಬೆ ಮಾರುಕಟ್ಟೆಯಲ್ಲಿ ಪ್ರಮುಖ ಬೇಡಿಕೆಯಿತ್ತು. ಉಳಿದಂತೆ ಪುಣೆ, ಇಂದೋರ್, ರಾಜಾಸ್ಥಾನ್, ಪಾಕಿಸ್ಥಾನ ಗಡಿವರೆಗೂ ರಫ್ತಾಗುತ್ತಿತ್ತು. ಪ್ರಸಕ್ತ ಖರೀದಿಗೆ ಜನ ಮುಂದಾಗದಿರುವುದರಿಂದ ರಾಜ್ಯ ಹಾಗೂ ಹೊರರಾಜ್ಯದ ಯಾವ ಮಾರುಕಟ್ಟೆಯಲ್ಲೂ ಬೇಡಿಕೆ ಇಲ್ಲ. ಪರಿಣಾಮ ಬೆಳೆದ ಬೆಳೆಯೊಂದಿಗೆ ರೈತನೂ ಸೊರಗುವಂತಾಗಿದೆ. ಸೀಸನ್ ಅವಧಿಯಲ್ಲಿ ಕೆ.ಜಿ.ಗೆ 40 ರಿಂದ 45 ರೂ. ಮಾರಾಟವಾಗುತ್ತಿದ್ದುದು ಪ್ರಸಕ್ತ 15 ರಿಂದ 17 ರೂ.ಗೆ ಬೇಡಿಕೆ ಬರುತ್ತಿದೆ. ಕನಿಷ್ಠ ಪಕ್ಷ 30 ರೂ. ಸಿಕ್ಕರಷ್ಟೆ ಬೆಳೆದ ಬೆಳೆಗೆ ಸಮಾನಾಗಿ ಅಸಲು ಪಡೆಯಬಹುದು ಎಂದು ಶೈಜು ಹೇಳುತ್ತಾರೆ.

9 ವರ್ಷದಿಂದ ಅನನಾಸು ಕೃಷಿಗೆ ಒಗ್ಗಿಕೊಂಡಿದ್ದು, 3 ವರ್ಷ ಲೀಝ್‌ಗೆ ಪಡೆದು ಬೆಳೆ ಬೆಳೆಯುತ್ತೇನೆ. 3 ವರ್ಷದಲ್ಲಿ 3 ಬೆಳೆ ಪಡೆಯಬಹುದಾಗಿದ್ದು, ಒಂದು ಬೆಳೆ ಪಡೆಯಲು 9 ತಿಂಗಳು ವಿವಿಧ ರಸಗೊಬ್ಬರ ಬಳಸಿ ಬೆಳೆಯಬೇಕಾಗುತ್ತದೆ. ಕನಿಷ್ಠ ಪಕ್ಷ ಎಕ್ರೆಗೆ 2.50ಲಕ್ಷ ರೂ. ವಿನಿಯೋಗಿಸಬೇಕಾಗುತ್ತದೆ. ಮೊದಲ ಬೆಳೆಯಲ್ಲಿ ಯಾವುದೇ ಲಾಭವಿಲ್ಲ. ಎರಡನೇ ಬೆಳೆಯಿಂದ ಬಳಿಕವಷ್ಟೆ ಲಾಭ ಈ ನಡುವೆ ಕಾರ್ಮಿಕರ ಸಮಸ್ಯೆ, ಹಂದಿ, ಮಂಗಗಳ ಕಾಟ ಎಲ್ಲವನ್ನೂ ಎದುರಿಸಿ ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ. ಜೈಪುರದಿಂದ ಬೇಡಿಕೆ ಬಂದಿದ್ದು, ಮೊದಲ 15 ಟನ್ ಅನನಾಸು ಕಳುಹಿಸಲಾಗಿದೆ. ರಾಜ್ಯ ಸರಕಾರ ಈ ಕುರಿತು ಗಮನ ಹರಿಸಿ ಬೆಳೆಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಶೈಜು ಬೇಸರದಿಂದ ಹೇಳುತ್ತಾರೆ.

More from the blog

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...