ದೈಕಿನಕಟ್ಟೆ ವಿಕ್ಟರ್ ನಿವಾಸದಲ್ಲಿ ಪಿಲಾತಬೆಟ್ಟು ಪಂಚಾಯತ್ ವಲಯದ ಪಂಚಾಯತ್ ಮಿಲನ ೨೦೧೯ ಕಾರ್ಯಕ್ರಮ ಮಾಜಿ ಸಚಿವ .ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜಕೀಯದಲ್ಲಿ ಸೋಲು ಗೆಲುವು ಸ್ವಾಭಾವಿಕ ಆದರೆ ಜನರ ಸೇವಕನಾಗಿ ಹಾಗೂ ಕ್ಷೇತ್ರದ ಅಭಿವೃದ್ದಿ ಕೆಲಸ ಮಾಡಿದ ತೃಪ್ತಿ ನನಗಿದೆ ಅಧಿಕಾರದಲ್ಲಿ ಇದ್ದರೂ ಇರದಿದ್ದರೂ ಸದಾ ಕಾರ್ಯಕರ್ತರ ಕಷ್ಟ ಸುಖ:ದಲ್ಲಿ ಭಾಗಿಯಾಗುವ ಮನೋಭಾವವನ್ನು ಮೈಗೂಡಿಸಿಕೊಂಡಿರುತ್ತೇನೆ ಎಂದರು. ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದ್ದು ಪಕ್ಷ ಸಂಘಟನೆಯಲ್ಲಿ ಹಾಗೂ ಬಲವರ್ದನೆಯಲ್ಲಿ ಹೆಚ್ಚು ಆಸಕ್ತಿ ವಹಿಸಿ ಮುಂಬರುವ ಪಂಚಾಯತ್ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ .ಬೇಬಿ ಕುಂದರ್ ಕಾರ್ಯಕರ್ತರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಪಕ್ಷದ ಘನತೆಯನ್ನು ಕಾಪಾಡುವ ಮುಖಾಂತರ ಪಕ್ಷ ಸಂಘಟಣೆಯಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಕರೆಯಿತ್ತರು. ಮುಂದಿನ ಅವಧಿಗೆ ವಲಯ ಹಾಗೂ ಬೂತ್ ಸಮಿತಿಯನ್ನು ಪುನರ್ ರಚಿಸಿ ನೂತನ ಪಂಚಾಯತ್ ಸಮಿತಿ ಅಧ್ಯಕ್ಷರನ್ನಾಗಿ ಬಾಲಾಜಿ ವಿ.ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಬೂತ್ ಸಮಿತಿ ಅಧ್ಯಕ್ಷರಾಗಿ ಪುರುಷೋತ್ತಮ, ಪ್ರಮೋದ್ ಕುಮಾರ್ , ಅರುಣ್ ಪೆರ್ನಾಂಡಿಸ್, ಹಾಗೂ ಯುವ ಕಾಂಗ್ರೆಸ್ ಅದ್ಯಕ್ಷರಾಗಿ ಲೋಕೇಶ್ ಕುಲಾಲ್, ಮಹಿಳಾ ಅದ್ಯಕ್ಷರಾಗಿ ಬೆನೆಡಿಕ್ಟ್ ಡಿಸೋಜ ಇವರನ್ನು ಅಯ್ಕೆ ಮಾಡಲಾಯಿತು., ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ಮಾಜಿ ಅಕ್ರಮ ಸಕ್ರಮ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್ ಉಪಸ್ಥಿತರಿದ್ದು ಮುಖಂಡರಾದ ರಾಜೇಂದ್ರ ಕೆ.ವಿ ಪ್ರಾಸ್ತಾವಿಸಿದರು, ಅಂಬ್ರೋಸ್ ಮೋರಸ್, ನೆಲ್ವಿಸ್ಟರ್ ಪಿಂಟೊ, ವಾಲ್ಟರ್ ಪಿಂಟೊ, ಯುಸೂಪ್ ಹಾಜಿ, ದರ್ವೇಜ್ ಇಬ್ರಾಹಿಂ, ಮೋಹನ್ ಹೆಗ್ಡೆ, ಮಹಮ್ಮದ್ ಷರೀಪ್, ಆನಂದ ನೈನಾಡ್ ಉಪಸ್ಥಿತರಿದ್ದರು, ಮೋಹನ್ ಸಾಲಿಯಾನ್ ಸ್ವಾಗತಿಸಿ ವಿಕ್ಟರ್ ಡಿಸೋಜ ಧನ್ಯವಾದಗೈದರು.

