ಮಂಗಳೂರು: ಇಂದು ಮತ್ತೊಂದು ರೋಗಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆಗೆ ಸೋಂಕು ದೃಢ. ಮಂಗಳೂರಿನ ಸೋಮೇಶ್ವರ ನಿವಾಸಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ಮಂಗಳೂರು ಹೊರವಲಯದ
ತೊಕ್ಕೊಟ್ಟು ಬಳಿಯ ಪಿಲಾರ್ ಪರಿಸರವನ್ನು ಸೀಲ್ ಮಾಡಲು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶಿಸಿದ್ದಾರೆ.

95 ಮನೆ ಮತ್ತು 10 ವಾಣಿಜ್ಯ ಮಳಿಗೆಗಳು ಕಂಟೈನ್ ಮೆಂಟ್ ವ್ಯಾಪ್ತಿಗೆ ಒಳಪಟ್ಟಿದ್ದು, ಕಂಟೈನ್ ಮೆಂಟ್ ಝೋನ್ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಪೂರ್ವದಿಂದ ಅಭಿ ಜನರಲ್ ಸ್ಟೋರ್, ಪಶ್ಚಿಮದಿಂದ ಪಿಲಾರ್ ಮಸೀದಿ, ಉತ್ತರ ಪಂಜದಾಯ ದೈವಸ್ಥಾನ, ದಕ್ಷಿಣ ನಿತ್ಯಾಧರ್ ಚರ್ಚ್ ಸೀಲ್ ಡೌನ್ ಮಾಡಲಾಗಿದೆ. ಉಳಿದ 5 ಕಿ.ಮೀ. ವ್ಯಾಪ್ತಿ ಸಂಪೂರ್ಣ ಬಫರ್ ಝೋನ್ ಆಗಿ ಘೋಷಿಸಲಾಗಿದೆ.

