ವಿಟ್ಲ: 181ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಬಂಟ್ವಾಳ ವಲಯದ ಹಿರಿಯ ಸದಸ್ಯರಾದ ಕನ್ಯಾನ ಬೆನಕಾ ಸ್ಟುಡಿಯೋ ಮಾಲಕ ಕುಮಾರಸ್ವಾಮಿ ಅವರನ್ನು ವಲಯದ ಸದಸ್ಯರ ಪರವಾಗಿ ಅವರ ಸ್ವಗೃಹದಲ್ಲಿ ದಂಪತಿ ಸಮೇತವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ರಾದ ಹರೀಶ್ ಮಾಣಿ, ಗೌರವಾಧಕ್ಷರಾದ ಸುಕುಮಾರ್ ಬಂಟ್ವಾಳ ಕಾರ್ಯದರ್ಶಿ ರೋಶನ್ ಕಲ್ಲಡ್ಕ ಕೋಶಾಧಿಕಾರಿ ಬಾಲಕೃಷ್ಣ ಛಾಯಕ್ಷೇಮಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕಾರದ ಅನಂದ್.ಎನ್ ಉಪಾಧ್ಯಕ್ಷರುಗಳಾದ ರಾಜರತ್ನ,ಹರೀಶ್ ಕುಂದಾರ್, ವಲಯದ ಪದಾಧಿಕಾರಿಗಳು ವಲಯದ 30ಕ್ಕಿಂತಲೂ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು. ಹಾಗೂ ಕನ್ಯಾನ ಭಾರತ ಸೇವಾಶ್ರಮ ಸಂಚಾಲಕಾರದ ಶಂಕರ ಭಟ್ಟಾಚಾರ್ಯ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ಈಶ್ವರ ಪ್ರಸಾದ್ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಮಧುರ ಈಶ್ವರ ಪ್ರಸಾದ್ ಭ್ರಮರಿ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ದಯಾನಂದ್ ಬಂಟ್ವಾಳ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

