ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿ.ಪಂ ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಪೆರುವಾಯಿ ಇವರ ಸಂಯುಕ್ತ ಆಶ್ರಯದಲ್ಲಿ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರುವಾಯಿಯಲ್ಲಿ ಆರೋಗ್ಯ ಇಲಾಖೆಯಿಂದ ಜಾನಪದ ಶೈಲಿಯ ಬೀದಿನಾಟಕ ಪ್ರದರ್ಶನ ನಡೆಯಿತು.
ಪೆರುವಾಯಿ ಗ್ರಾಮ ಪಂಚಾಯತು ಸದಸ್ಯರಾದ ರೇವತಿ ದೀಪ ಬೆಳಗಿಸಿ ಚೆಂಡೆ ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಚಚ್ಛತೆ, ಪರಿಸರ ರಕ್ಷಣೆ, ತಾಯಿ ಕಾರ್ಡ್, ತಾಯಿ ಭಾಗ್ಯ ಸಾಂಕ್ರಾಮಿಕ ರೋಗಗಳು, ಪ್ರಸವಪೂರ್ವ ಭ್ರೂಣ ಪರೀಕ್ಷೆ, ಆಯುಷ್ಮಾನ್ ಭಾರತ್, ನಮ್ಮ ಆರೋಗ್ಯ ಕರ್ನಾಟಕ ಸ್ವಚ್ಛ ಮೇವ ಜಯತೆ ಇತ್ಯಾದಿ ಸಂದೇಶ ಸಾರುವ ಬೀದಿನಾಟಕ, ಹಾಡುಗಳ ಕಾರ್‍ಯಕ್ರಮಗಳನ್ನು ಮೌನೇಶ್ ವಿಶ್ವಕರ್ಮ ಅವರ ಸಂಸಾರ ಜೋಡುಮಾರ್ಗ ಬಿ.ಸಿ ರೋಡ್ ತಂಡ ನಡೆಸಿಕೊಟ್ಟಿತು.
ಶಾಲಾ ಮುಖ್ಯ ಶಿಕ್ಷಕ ಕುಂಞ ನಾಯ್ಕ ಎಂ. ಸ್ವಾಗತಿಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹರಿಣಾಕ್ಷಿ ವಂದಿಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಅಮಿತ, ಜಯಂತಿ ಆಶಾಕಾರ್‍ಯಕರ್ತೆಯರು , ಶಾಲಾ ಶಿಕ್ಷಕರು ಮಕ್ಕಳು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.
