ವಿಟ್ಲ: ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಸಮುದಾಯ ದಿನ ಆಚರಣೆ, ನೂತನ ನವೀಕೃತ ಸ್ಮಶಾನ ಲೋಕಾರ್ಪಣೆ ಹಾಗೂ ತೆರೆದ ವೇದಿಕೆಯ ಉದ್ಘಾಟನಾ ಸಮಾರಂಭ ಜ.27 ರಂದು ನಡೆಯಲಿದೆ.
ಬೆಳಗ್ಗೆ ನವೀಕೃತ ಸ್ಮಶಾನ ಲೋಕಾರ್ಪಣೆ ಹಾಗೂ ಸ್ಮಶಾನ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನಾ ಅವರು ನೀಡಲಿದ್ದಾರೆ. ಬಳಿಕ ಅವರ ನೇತೃತ್ವದಲ್ಲಿ ಬಲಿ ಪೂಜೆ ನಡೆಯಲಿದೆ. ಸಭಾ ಕಾರ್‍ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರು ಮಾಜಿ ಶಾಸಕ ಜೆ.ಆರ್ ಲೋಬೋ ಭಾಗವಹಿಸಲಿದ್ದಾರೆ ಎಂದು ಚರ್ಚ್‌ನ ಧರ್ಮ ಗುರು ವಿಶಾಲ್ ಮೋನಿಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
