Sunday, July 13, 2025

ಪೆರ್ನೆ: ಸಾಧಕರಿಗೆ ಸನ್ಮಾನ

ಕಲ್ಲಡ್ಕ: ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯದಲ್ಲಿ ಸಂಸ್ಥೆಯ ಸ್ಥಾಪಕರಾದ ಬೆಳ್ಳಿಪ್ಪಾಡಿ ಅತ್ರಬೈಲು ದಿ. ರಾಮದಾಸ ರೈ ಅವರ ಪುಣ್ಯ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸೇವೆಗೈದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಇಟ್ಟುಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಸಂತ ಜಾರ್ಜ್ ಪದವಿಪೂರ್ವ ವಿದ್ಯಾಲಯದ ಸಂಚಾಲಕ ಅಬ್ರಾಹಾಂ ವರ್ಗೀಸ್ ಪಾಲ್ಗೊಂಡು ದಿ. ರಾಮದಾಸ ರೈ ಅವರ ಶುಭ ಸಂಸ್ಮರಣೆ ಮಾಡಿದರು. ಸಂಸ್ಥೆಯ ಸಂಚಾಲಕ ಟಿ.ಹರೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಉಜಿರೆಯ ರಬ್ಬರ್ ಮಾರಾಟ ಮತ್ತು ಸಂಸ್ಮರಣಾ ಸಹಕಾರಿ ಸಂಘದ ಹಿರಿಯ ಅಧಿಕಾರಿ ಎಂ.ಗಿರೀಶ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಲಸುಬ್ರಹ್ಮಣ್ಯ ಸಿ.ಎಸ್. ಗುರುಗಳಿಗೆ ಗುರುವಂದನೆ ಸಲ್ಲಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಐತಪ್ಪ ಸೇನವ, ಶಿವರಾಮ ಭಟ್ ಹೆಚ್., ಜಯಾನಂದ ರೈ ಯನ್., ಬಿ.ಗೋಪಾಲಕೃಷ್ಣ ಭಟ್ ಹಾಗೂ ಸದಾಶಿವ ಪೂಜಾರಿ ಎಸ್. ಇವರಿಗೆ ಆಡಳಿತ ಮಂಡಳಿಯಿಂದ ಗೌರವ ಸನ್ಮಾನ ನೀಡಲಾಯಿತು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ತಾರನಾಥ ಶೆಟ್ಟಿ ಎಚ್., ಸ್ವಾಗತಿಸಿ, ನಿವೃತ್ತ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಪ್ರಾಂಶುಪಾಲ ಶೇಖರ ರೈ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕರುಗಳಾದ ಸುಧಾಕರ ರೈ ಎಸ್., ಚೆನ್ನಕೇಶವ ಡಿ.ಆರ್., ಉದಯ ಎಸ್, ಶ್ರೀಮತಿ ಇಂದಿರಾ, ಸತ್ಯನಾರಾಯಣ ರೈ ಕೆ. ಇವರು ನಿವೃತ ಶಿಕ್ಷಕರ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಚಂದ್ರಹಾಸ ರೈ ವಂದಿಸಿದರು. ಉಪನ್ಯಾಸಕ ಗಣೇಶ ರೈ ಎಂ. ಕಾರ್ಯಕ್ರಮ ನಿರೂಪಿಸಿದರು.

More from the blog

ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ..

ಪೊಳಲಿ: ವ್ಯಾಸ ಪೂರ್ಣಿಮೆಯನ್ನು ಗುರುಪೂರ್ಣಿಮೆಯಂದು ಹಿಂದಿನಿAದಲು ಜಗತಿನಾಧ್ಯಂತ ಆಚರಣೆಯನ್ನು ಮಠ ಆಶ್ರಮಗಳಲ್ಲಿ ಆಚರಿಸುತ್ತ ಬಂದಿರುತ್ತಾರೆ. ಹಿಂದುಗಳಿಗಲ್ಲದೆ ಬೇರೆ ಸಾಂಪ್ರದಾಯದವರಿಗೂ ವೀಶೇಷ ಗುರುಪೂರ್ಣಿಮೆದಿನವಾಗಿರುತ್ತದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮಿಜಿಯವರು...

ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

ಕೈಕಂಬ: ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು ೬ರಂದು ಭಾನುವಾರ ಪುಂಚಮೆ ಶ್ರೀ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತರಾದ ಪೊಳಲಿ...

ನೆಟ್ಲಮುಡ್ನೂರು : ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಜನಜಾಗೃತಿ ಅಭಿಯಾನ..

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ "ಜನಜಾಗೃತಿ ಅಭಿಯಾನ" ನೇರಳಕಟ್ಟೆಯಲ್ಲಿ ಶನಿವಾರ ಸಂಜೆ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವ...

ಶಕ್ತಿ ಯೋಜನೆಯ ಪ್ರಯಾಣಿಕರ ಸಂಖ್ಯೆ 500 ಕೋಟಿ ದಾಟಿದೆ – ಭರತ್ ಮುಂಡೋಡಿ..

ಬಂಟ್ವಾಳ: ಬಡವರ ಉದ್ಧಾರ, ಮಹಿಳಾ ಸ್ವಾವಲಂಬನೆಯ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ದ.ಕ.ಜಿಲ್ಲೆಯಲ್ಲಿ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳನ್ನು ಯೋಜನಾ ವ್ಯಾಪ್ತಿಗೆ ತರಲಾಗಿದೆ. ಪ್ರಸ್ತುತ ಶಕ್ತಿ ಯೋಜನೆಯ...