ಬಂಟ್ವಾಳ: ಪೆರಾಜೆ ಕುಲಾಲ ಗ್ರಾಮ ಸಮಿತಿ ಇದರ ವಾರ್ಷಿಕ ಮಹಾಸಭೆ ಮಿತ್ತಪೆರಾಜೆ , ಬೊಳ್ಳುಕಲ್ಲು ಶ್ರೀ ದೇವಿಭಜನಾ ಮಂದಿರದಲ್ಲಿ ಮಾಣಿ ಕುಲಾಲ ಸಂಘದ ಅಧ್ಯಕ್ಷ ಬೋಜಕುಲಾಲ್ ಅವರ ಆಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮ ಗ್ರಾಮಗಳಲ್ಲಿ ಗ್ರಾಮ ಸಮಿತಿ ಗಳ ಮೂಲಕ, ಸಾಮಾಜಿಕ ಕಾರ್ಯಕ್ರಮಗಳನ್ನು , ಚಟುವಟಿಕೆಗಳನ್ನು ಮಾಡಬೇಕು .
ಪ್ರತಿ ಗ್ರಾಮ ಸಮಿತಿಗಳು ಕ್ರೀಯಾಶೀಲವಾಗಿ ಸಮಾಜದ ಸಮಸ್ಯೆ ಗಳಿಗೆ ಸ್ಪಂದನೆ ನೀಡಿದಾಗ ಮಾಣಿ ಕುಲಾಲ ಸಂಘದ ಸಂಘಟನಾತ್ಮಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪೆರಾಜೆ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪೆರಾಜೆ ಕಳೆದ ಎರಡು ವರ್ಷಗಳ ಅವಧಿಯ ಅನುಭವ ಹಂಚಿಕೊಂಡರು.
ಯತಿರಾಜ್ ಪೆರಾಜೆ ವಾರ್ಷಿಕ ವರದಿ ಮಂಡಿಸಿದರು.
ಬಳಿಕ ಮುಂದಿನ ಅವಧಿಗೆ ನೂತನ ಸಮಿತಿಯ ರಚನೆ ನಡೆಯಿತು.
ಈ ಸಂದರ್ಭದಲ್ಲಿ ಮಾಣಿ ಕುಲಾಲ ಸಂಘದ ಕಾರ್ಯದರ್ಶಿ ಪದ್ಮನಾಭ ಕೊಮ್ಮಕೋಡಿ,
ಪೆರಾಜೆ ಗ್ರಾಮ ಸಮಿತಿಯ ಪ್ರಮುಖರಾದ ಪುರುಷೋತ್ತಮ ಸಾದಿಕುಕ್ಕು, ಉಮೇಶ್ ಕುಲಾಲ್ ಸಾದಿಕುಕ್ಕು, ಮಾದವ ಪಾಳ್ಯ, ಜಮಾರ್ಧನ ಏಣಾಜೆ, ನಿತೇಶ್ ಮುಲಿತ್ತಪಡ್ಪು, ಚಂದ್ರಹಾಸ ಸಾದಿಕುಕ್ಕು, ಮನೋಜ್ ಮಿತ್ತಪೆರಾಜೆ, ಸುಂದರ ಮಿತ್ತಪೆರಾಜೆ, ಸಂದೀಪ್ ಬರೆ, ನಯನ್ ಮಿತ್ತಪೆರಾಜೆ, ದೀಪಕ್ ಕೊಮ್ಮಕೋಡಿ, ಚೇತನ್ ಬೊಳ್ಳುಕಲ್ಲು, ಶೇಖರ್ ಕೊಮ್ಮಕೋಡಿ ಮತ್ತಿತರರು ಉಪಸ್ಥಿತರಿದ್ದರು.