Wednesday, June 25, 2025

ಯಕ್ಷಗಾನ ಕಲಾವಿದರ ಜೊತೆ ಕಲಾವಲಯವನ್ನು ಬಿಜೆಪಿ ಪಕ್ಷ ಗುರುತಿಸಿದೆ: ಸತೀಶ್ ಶೆಟ್ಟಿ ಪಟ್ಲ

ಬಂಟ್ವಾಳ: ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ಇದರ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ ಹಾಗೂ ಕಾರ್ಮಿಕ ಇಲಾಖೆಯ ಮಾಹಿತಿ ಕಾರ್ಯಕ್ರಮ ಮತ್ತು ನೋಂದಣಿ ಅಭಿಯಾನ ಕಾರ್ಯ ಕ್ರಮ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ,ಅವರು ಮಾತನಾಡಿ ಕಲಾವಿದರು ಜೊತೆ ಯಾಗಿ ಸಂಘಟಿತ ರಾಗಬೇಕು, ಸರಕಾರದ ಮೂಲಕ ಕಲಾವಿದರ ನೋಂದಣಿ ಕಾರ್ಯಕ್ರಮ ಕಲಾವಿದರ ಬದುಕಿಗೆ ಹೊಸ ರೂಪ ನೀಡಿದೆ.

ಯಕ್ಷಗಾನ ಕಲಾವಿದರ ಜೊತೆಗೆ ಕಲಾ ವಲಯವನ್ನು ಬಿಜೆಪಿ ಪಕ್ಷ ನೋಡಿ ಅವರ ಬದುಕಿಗೆ ನೆರವು ನೀಡುವ ಮಹಾತ್ಕಾರ್ಯ ಮಾಡಿದೆ ಎಂದು ಅವರು ಹೇಳಿದರು. ಕಲಾವಿದರಿಗಾಗಿ ತುಡಿತ ಮಿಡಿತಕ್ಕಾಗಿ ಪ್ರಾಮಾಣಿಕ ವಾಗಿ ದುಡಿಯುವವರು ಅಧ್ಯಕ್ಷರಾಗಿ ಬರಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಮಾತನಾಡಿ , ಕಲಾವಿದರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಬಿಜೆಪಿ ಸದಾ ಬದ್ದವಾಗಿದೆ.ಪ್ರಕೋಷ್ಟಕ್ಕೆ ಕಲಾವಿದರು ಪೂರ್ಣ ರೀತಿಯ ಸಹಾಯ ನೀಡುವಂತೆ ಅವರು ಮನವಿ ಮಾಡಿದರು.

ವೇದಿಕೆಯಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ , ತಾಲೂಕು ಸಂಚಾಲಕ ದಿನೇಶ್ ರಾಯಿ ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿ ಗ್ರೇಸ್ ಮೆಲ್ಬಿನ್ ಅಲ್ಮೇಡ ಅವರು ಕಾರ್ಮಿಕ ಇಲಾಖೆಯ ಮಾಹಿತಿ ನೀಡಿದರು.

ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂಚಾಲಕ ದಿನೇಶ್ ರಾಯಿ ಸ್ವಾಗತಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಸಾಧಕರ ನ್ನು ಗೌರವಿಸಲಾಯಿತು.

More from the blog

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...

ಇಡ್ಕಿದು ಗ್ರಾ. ಪಂ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ವಿಚಾರ : ಪಿಡಿಒ ಅಮಾನತು

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ‌ ಆರೋಪದ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು...

ವೀರಕಂಭ ಗ್ರಾಮದ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ...

ಆಕ್ಸಿಯಂ-4 ಉಡಾವಣೆ ಯಶಸ್ವಿ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು..

ಆಕ್ಸಿಯಮ್ 4 ಮಿಷನ್ ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ...