Thursday, February 5, 2026

*ಮಕ್ಕಳಿಗೆ ಮಧುಸಂಗ್ರಹದ ಪಾಠ*

ವಿಧ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದ ಗುರಿಯಾಗಬೇಕು.ಮಕ್ಕಳಿಗೆ ಆಟ ಪಾಠಗಳ ಜೊತೆಗೆ ಬದುಕುವ ಕಲೆಯನ್ನು ಕಲಿಸಿದಾಗಲೆ ಶಿಕ್ಷಣಕ್ಕೆ ಒಂದು ಅರ್ಥ ಬರುತ್ತದೆ ಎಂಬ ವಿಚಾರ ಮನಗಂಡು ಶ್ರೀ.ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳ ಇಲ್ಲಿ ದಿನಾಂಕ 18-03-2021 ರಂದು ಶಾಲೆಯಲ್ಲೇ ತಾವೇ ಪ್ರಾರಂಬಿಸಿದ ಜೇನು ಪೆಟ್ಟಿಗೆಯಲ್ಲಿನ ಜೇನು ಸಂಗ್ರಹ ಮಾಡುವ ಪ್ರಾತ್ಯಕ್ಷಿಕೆಯನ್ನು ಶಾಲಾ ಹಳೆವಿದ್ಯಾರ್ಥಿನಿಯ ಹೆತ್ತವರೂ ಹಾಗೂ ಜೇನುಕೃಷಿಯಲ್ಲಿ ಪರಿಣತಿಯನ್ನು ಹೊಂದಿರುವ  ಬಾಬು ಇವರು ನೀಡಿದರು.

ಜೇನುನೊಣಗಳಲ್ಲಿ ಗಂಡು ಹಾಗು ಹೆಣ್ಣು ಜೇನನ್ನು ಗುರುತಿಸುವ ವಿಧಾನ,ರಾಣಿ ಜೇನು ಇತರ ಜೇನಿಗಿರುವ ವ್ಯತ್ಯಾಸ,ರಾಣಿ ಜೇನು ತಯಾರಾಗುವ ಬಗೆ,ರಾಯಲ್ ಜೆಲ್ಲಿ ಅಂದರೇನು ಅದು ಹೇಗಿರುತ್ತೆ,ಜೇನು ತೆಗೆಯುವ ವಿಧಾನ ಅದನ್ನು ಯಂತ್ರಕ್ಕೆ ಹಾಕಿ ತಿರುಗಿಸುವ ವಿಧಾನ ಹಾಗೂ ಅದರ ಸಂಗ್ರಹ ಇತ್ಯಾದಿ ವಿ‍ಚಾರಗಳನ್ನು ಪ್ರಾತ್ಯಕ್ಷಿಕೆ ಮುಖಾಂತರ ವಿದ್ಯಾರ್ಥಿಗಳಿಗೆ ಹಾಗೂ ನೆರೆದ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳಿಗೆ ತಿಳಿಯಪಡಿಸಿದರು.ಮಕ್ಕಳಿಗೆ ಜೇನು ಹುಟ್ಟುಗಳನ್ನು ಜೇನು ನೊಣ ಸಹಿತ ನೀಡಿ ಜೇನು ನೊಣಗಳ ಭಯವನ್ನು ನಿವಾರಿಸಿದರು.ಅದು ಕಚ್ಚಿದಾಗ ಹೇಗೆ ಅದರ ಸೂಜಿಯನ್ನು ತೆಗೆಯಬೇಕು ಎಂಬಿತ್ಯಾದಿ ವಿಚಾರಗಳನ್ನು ತಿಳಿಯಪಡಿಸಿದರು.ಸಂಗ್ರಹವಾದ ಜೇನನ್ನು ವಿದ್ಯಾರ್ಥಿಗಳಿಗೆ ರುಚಿ ಸವಿಯಲು ನೀಡಿದ್ದು ಈ ಕಾರ್ಯಕ್ರಮದ ವಿಶೇಷ. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ‌.ವಿ.ಇವರು ಗಂಡು ಮೊಟ್ಟೆ ಹಾಗೂ ಹೆಣ್ಣು ಮೊಟ್ಟೆಯ ವ್ಯತ್ಯಾಸ,ಅದು ಬೇರೆ ಮನೆ ಮಾಡುವ ಕಾರಣ ಗೊತ್ತಾಗುವ ರೀತಿ ಇತ್ಯಾದಿಗಳನ್ನು ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ವೃಂದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.

More from the blog

ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಗೆ ಹನೀಫ್ ಬಗ್ಗುಮೂಲೆ ಹಾಗೂ ಸಿದ್ದೀಕ್ ಸೂರ್ಯ ನೇಮಕ

ಬಂಟ್ವಾಳ : ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಳಕೆಮಜಲು ಸಮೀಪದ ಬಗ್ಗುಮೂಲೆ ನಿವಾಸಿ ಹನೀಫ್ ಬಗ್ಗುಮೂಲೆ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಯುವ ಸಂಘಟಕ, ಯುವ ಉದ್ಯಮಿ,...

ಪಾಕಿಸ್ತಾನಕ್ಕೆ ಹೋಲಿಸಿದಾಗ ಸಿಟ್ಟುಗೊಳ್ಳುವ ನೀವು, ನಮ್ಮ ಸೈನಿಕರ ಮೇಲೆ ಪಾಕ್ ಪ್ರೇರಿತ ಉಗ್ರರಿಂದ ದಾಳಿಯಾದಾಗ ಖಂಡಿಸುವುದಿಲ್ಲ ಏಕೆ?

ಬೆಂಗಳೂರು: "ಶಾಸಕ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯರ ಹೇಳಿಕೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದಾಗ ನಿಮಗೆ ತೀವ್ರ ಕೋಪ ಬರುತ್ತದೆ. ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಎಂಬ ಅರಿವು ನಿಮಗಿದ್ದರೆ, ಪುಲ್ವಾಮಾ ಮತ್ತು ಪಹಲ್ಗಾಮ್‌ಗಳಲ್ಲಿ...

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಕುದ್ರೆಬೆಟ್ಟು : ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ – ನಾಲ್ವರಿಗೆ ಗಾಯ

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಮೇಲತ್ಸುವೆಯ ಕೊನೆಯ ಭಾಗದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಅಳಕೆಮಜಿಲು ನಿವಾಸಿ ಅವ್ವಮ್ಮ ಹಾಗೂ ಸುಹೈಲ್ ರಿಕ್ಷಾ...